Header Ads
Breaking News

ಎರ್ಮಾಳು ವಾರ್ಷಿಕ ಜಾತ್ರಾ ಪೂರ್ವಭಾವಿಯಾಗಿ ಬಿಲ್ಲವರ ಬಲಿ ಸೇವೆ : ರಂಗಪೂಜೆ ಸಹಿತ ಬಲಿಸೇವೆಯಲ್ಲಿ ಭಾಗಿಯಾದ ನೂರಾರು ಸಮಾಜ ಬಾಂಧವರು

ಎರ್ಮಾಳ್ ಜಪ್ಪು ಕಂಡೇವು ಅಡೆಪು ಎಂಬ ಮಾತಿನಂತೆ ಎರ್ಮಾಳು ಜನಾರ್ದನ ಸನ್ನಿಧಿಯಲ್ಲಿ ಆರಂಭಗೊಳ್ಳಲಿರುವ ಈ ವರ್ಷದ ಪ್ರಥಮ ವಾರ್ಷಿಕಾ ಜಾತ್ರಾ ಪೂರ್ವಭಾವಿಯಾಗಿ ಪ್ರತೀ ವರ್ಷ ನಡೆಯುವ ಬಿಲ್ಲವರ ಬಲಿಸೇವೆ ಹಾಗೂ ರಂಗಪೂಜೆ ಬಹಳ ಅದ್ಧೂರಿಯಾಗಿ ನಡೆದಿದ್ದು, ಈ ಪುಣ್ಯ ಧಾರ್ಮಿಕ ಕಾರ್ಯಕ್ಕೆ ಗ್ರಾಮದ ನೂರಾರು ಮಂದಿ ಸಮಾಜ ಭಾಂದವರು ಪಾಲ್ಗೊಂಡಿದ್ದರು.
ಈ ಸಂದರ್ಭ ವಿ4 ನ್ಯೂಸ್ ನೊಂದಿಗೆ ಮಾತನಾಡಿದ ಧಾರ್ಮಿಕ ಬಿಲ್ಲವ ಮುಖಂಡ ಸದಾನಂದ ನಾಯಗ, ಹಿರಿಯರ ಕಾಲದಿಂದಲೂ ದೇವಳದ ವಾರ್ಷಿಕ ಜಾತ್ರೆಯ ಪೂರ್ವಬಾವಿಯಾಗಿ ಬಿಲ್ಲವ ಸಮಾಜದ ಮೂಲಕ ನಡೆದುಕೊಂಡು ಬಂದಿರುವ ಬಲಿಸೇವೆ ಹಾಗೂ ರಂಗಪೂಜೆ ಗುರು ಹಿರಿಯರ ಮಾರ್ಗದರ್ಶನದಂತ್ತೆ ಸಮಿತಿಯೊಂದನ್ನು ರಚಿಸಿ ಅದರ ಮೂಲಕ ನಡೆಯುವ ಈ ಧಾರ್ಮಿಕ ಸೇವೆಯಲ್ಲಿ ಗ್ರಾಮದ ನೂರಾರು ಮಂದಿ ಪಾಲ್ಗೋಂಡಿದ್ದು ಬಹಳ ಅದ್ಧೂರಿಯಾಗಿ ಪ್ರತೀ ವರ್ಷದಂತ್ತೆ ಈ ವರ್ಷವೂ ನಡೆಯಿತು ಎಂದರು. ಈ ಸಂದರ್ಭ ಬಿಲ್ಲವ ಪ್ರಮುಖರಾದ ಓಮಯ್ಯ ಪೂಜಾರಿ, ಸತೀಶ್ ಪೂಜಾರಿ, ರತ್ನಾಕರ್ ಕೋಟ್ಯಾನ್, ನಾರಾಯಣ ಪೂಜಾರಿ ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *