Header Ads
Header Ads
Header Ads
Breaking News

ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಕ್ಕೆ 35ರ ಸಂಭ್ರಮ : ಶ್ರೀ ಜನಾರ್ದನ ಕೆರೆ ದೀಪೋತ್ಸವದಂದ್ದು ಸಂಭ್ರಮಾಚರಣೆ

ಯಾವುದೇ ಸಂಸ್ಥೆಯನ್ನು ಕಟ್ಟುವಾಗ ಇರುವ ಉತ್ಸಾಹ.. ಅದನ್ನು ಉಳಿಸಿಕೊಂಡು ಹೋಗುವಾಗ ಇರೋದಿಲ್ಲ ಎಂಬ ಮಾತಿಗೆ ಅಪವಾದ ಎಂಬಂತ್ತೆ, ಎರ್ಮಾಳಿನ ಶ್ರೀ ನಿಧಿ ಮಹಿಳಾ ಮಂಡಳಿ ಕಳೆದ ಮೂವತ್ತೈದು ವರ್ಷಗಳಿಂದಲೂ ಸಮಾಜ ಸೇವೆಯಲ್ಲಿ ಸಂಸ್ಥೆಯನ್ನು ತೊಡಗಿಸಿಕೊಂಡು ಇದೀಗ 35 ಯುವ ಉತ್ಸಾಹದಲ್ಲಿ ಮುನ್ನುಗ್ಗುತ್ತಿದೆ.ಈ ಸಂಸ್ಥೆ ೩೫ರ ಸಂಭ್ರಮಾಚರಣೆಯ ಸಂದರ್ಭ ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ಸಹಾಯ, ಅಸಕ್ತರಿಗೆ ನೆರೆವು ಹೀಗೆ ಹತ್ತಾರು ರೂಪದಲ್ಲಿ ಸಮಜೋಮುಖಿ ಕೆಲಸಗಳನ್ನು ಮಾಡುವ ಮೂಲಕ ಗ್ರಾಮದ ಜನರ ಮನ ಗೆದ್ದಿದೆ. ಈ ಬಗ್ಗೆ ಮಾತನಾಡಿದ ಸಂಸ್ಥೆಯ ಮಾಜಿ ಅಧ್ಯಕ್ಷರೂ ಉಡುಪಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರೂ ಆಗಿರುವ ಶೀಲಾ ಕೆ. ಶೆಟ್ಟಿ, ನಮ್ಮೀ ಸಂಸ್ಥೆಯ ಯಶಸ್ಸಿನ ಗುಟ್ಟು ನಮ್ಮಲ್ಲಿ ಅಧ್ಯಕ್ಷ ಸ್ಥಾನ ಎಂದಿದ್ದರೂ.. ಇಲ್ಲಿ ಸರ್ವಾಧಿಕಾರ ಧೋರಣೆ ಇಲ್ಲ ಬದಲಾಗಿ ಸಾಮಾನ್ಯ ಸದಸ್ಯರ ಮಾತಿಗೂ ಸಮಾನ ಮನ್ನಣೆ ನಮ್ಮ ಸಂಸ್ಥೆಯಲ್ಲಿದೆ. ಆ ನಿಟ್ಟಿನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಸಮಾಜ ಸೇವೆ ಮಾಡಿಕೊಂಡು ಮೂತ್ತೈದು ವರ್ಷಗಳನ್ನು ಕಳೆದಿದೆ ಎಂದರು. ಇದೇ ಸಂದರ್ಭ ಅಂಗನವಾಡಿ ಪುಟಾಣಿಗಳಿಗೆ ಹಾಗೂ ಸಂಘದ ಸದಸ್ಯರಿಗೆ ಏರ್ಪಾಡಿಸಿದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು, ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ವೈವಿಧ್ಯ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ರೋಹಿತ್ ಹೆಗ್ಡೆ, ಶಂಕರ್ ಶೆಟ್ಟಿ, ಕಿಶೋರ್ ಶೆಟ್ಟಿ, ಪ್ರತೀಕ್ಷಾ ಭಟ್, ಶರ್ಮಿಳ, ಅಮೃತಾ ಮೊದಲಾದವರಿದ್ದರು.

Related posts

Leave a Reply

Your email address will not be published. Required fields are marked *