Header Ads
Breaking News

ಎರ್ಮಾಳು ಸೇತುವೆ ಬಳಿ ಗದ್ದೆ ಪ್ರದೇಶಕ್ಕೆ ಬೆಂಕಿ: ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

ಕೆಲವೇ ದಿನಗಳ ಹಿಂದೆ ಯಾರೋ ಕಿಡಿಗೇಡಿಗಳ ಹೀನಕೃತ್ಯಕ್ಕೆ ಅದೇಷ್ಟೋ ಮರಗಿಡಗಳು ಸಹಿತ ಜಂತುಗಳು ನಾಶವಾಗಿದ್ದು, ಇದೀಗ ಅದೇ ಪ್ರದೇಶದ ಹೆದ್ದಾರಿಯ ಪಶ್ಚಿಮ ಭಾಗದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಮತ್ತೆ ಅದೇಷ್ಟೋ ಮರಗಿಡಗಳು ಸಹಿತ ಜಂತುಗಳು ಸುಟ್ಟು ಕರಗಲಾಗಿದೆ.

ಆಕಸ್ಮಿಕ ಬೆಂಕಿಯ ಹೆಸರಲ್ಲಿ ಮುಳ್ಳು ಪೊದೆಗಳ ತೆರವುಗೊಳಿಸಲು ಈ ದಾರಿಯನ್ನು ತುಳಿಯಲಾಗಿದೆ ಎಂಬ ಆರೋಪವೂ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಈ ಕೃತ್ಯದಿಂದಾಗಿ ಬಹಳಷ್ಟು ಮರಗಿಡಗಳು ಸುಟ್ಟು ಹೋಗಿದ್ದು ಮಾತ್ರವಲ್ಲ, ಹತ್ತಾರು ಆಮೆಗಳು ಸಹಿತ ಕೇರೆ ಹಾವುಗಳು ಸುಟ್ಟು ಕರಗಲಾಗಿದೆ. ಈ ಬೃಹತ್ ಬೆಂಕಿಯನ್ನು ನಂದಿಸಲು ಸ್ಥಳೀಯ ಯುಪಿಸಿಎಲ್‌ನ ಅಗ್ನಿಶಾಮಕ ದಳ ಸಹಿತ ಮಲ್ಪೆಯಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಜಂಟಿಯಾಗಿ ಬಹಳಷ್ಟು ಪ್ರಯಾಸದಿಂದ ಬೆಂಕಿ ನಂದಿಸಿದ್ದು, ಸ್ಥಳೀಯವಾಗಿ ವಾಸದ ಮನೆಗಳಿಗೆ ಆಗ ಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ. ಇದೇ ಸಂದರ್ಭ ದಟ್ಟವಾದ ಹೊಗೆ ಇಡೀ ಪ್ರದೇಶವನ್ನು ಆಕ್ರಮಿಸಿದ್ದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕಾದ ಘಟನೆಯೂ ಸಂಭವಿಸಿದೆ.

Related posts

Leave a Reply

Your email address will not be published. Required fields are marked *