Header Ads
Header Ads
Breaking News

ಎಲೆಮರೆಯಲ್ಲಿರುವ ವಾದ್ಯ ಸಂಗೀತಗಾರ ಬಾಲಚಂದ್ರ ಪೆರಾಜೆ

ಸಂಗೀತ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಗಿಡ ಮರ ಬಳ್ಳಿಗಳೂ ಕೂಡ ಸಂಗೀತಕ್ಕೆ ತಲೆದೂಗುತ್ತವೆ ಎಂದು ಬಲ್ಲವರು ಹೇಳಿದ ಮಾತನ್ನು ನಾವು ಕೇಳಿದ್ದೇವೆ. ಹೀಗೆ ಪ್ರತಿಯೊಬ್ಬರು ಸಂಗೀತವನ್ನು ಇಷ್ಟ ಪಡುತ್ತಾರೆ. ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾವಂತ ಸಂಗೀತಗಾರರು ಇದ್ದರೂ ಅವರಿಗೆ ಸಮರ್ಕವಾದ ವೇದಿಕೆ ದೊರೆಯದೆ ಎಲೆಮರೆಯ ಕಾಯಿಯಾಗಿ ಉಳಿದುಕೊಂಡಿದ್ದಾರೆ. ಅಂತಹವರಲ್ಲಿ ಪ್ರತಿಭಾವಂತ ವಾದ್ಯ ಸಂಗೀತ ಕಲಾವಿದ ಸುಳ್ಯ ಸಮೀಪದ ಬಾಲಚಂದ್ರ ಪೆರಾಜೆಯವರು ಒಬ್ಬರು.

ಬಾಲಚಂದ್ರ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಅನೇಕ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.ವಿಶ್ವ ವಿಖ್ಯಾತ ಮೈಸೂರು ದಶರದಲ್ಲಿ ಸಂಗೀತ ನುಡಿಸಿದ್ದಾರೆ. ಅನೇಕ ದೇವಾಲಯ,ಶುಭ ಸಮಾರಂಭದಲ್ಲಿ ವಾದ್ಯ ಸಂಗೀತ ನುಡಿಸಿ ಜನರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ವಾದ್ಯ ಸಂಗೀತದಲಿ ಸೀನಿಯರ್ ಶಿಕ್ಷಣ ಪಡೆದ ಬಳಿಕ ವಿದ್ವತ್ ಶಿಕ್ಷಣ ಪಡೆದು ಇನ್ನಷ್ಟು ಸಾಧನೆ ಮಾಡಬೇಕೆಂದು ಅವರು ದೊಡ್ಡ ಕನಸು ಕಾಣುತ್ತಿದ್ದಾರೆ.ಈ ಎಲೆಮರೆಯ ಪ್ರತಿಭಗೆ ಸ್ಥಳೀಯರ ಪ್ರೋತ್ಸಾಹ ಒಂದಷ್ಟು ಕಡಿಮೆಯಾಗಿದೆ ಎಂಬ ಕೊರಗು ಅವರಲಿದೆ.ಈ ಹಿನ್ನಲೆಯಲ್ಲಿ ಸ್ಥಳಿಯ ಜನರು ಸಂಗೀತ ಪ್ರತಿಭಗೆ ಇನ್ನಷ್ಟು ಉತ್ತಮ ವೇದಿಕೆಯನ್ನು ಒದಗಿಸಿ ಕೊಡುವ ಅಗತ್ಯ ಕಾಡುತ್ತಿದ್ದು ಅವರ ಕಲಾ ಪ್ರತಿಭೆಯನ್ನು ಬೆಳೆಸಲು ಕಲಾ ಪ್ರೇಮಿಗಳ ಸಹಕಾರ ಬೇಕಾಗಿದೆ.ಬಾಲಚಂದ್ರ ವಾದ್ಯ ಸಂಗೀತ ಕುಟುಂಬದಿಂದಲೇ ಬಂದವರು.ಅವರಿಗೆ ಬಾಲ್ಯದಿಂದಲೇ ಸಂಗೀತ ಅಂದರೆ ಇಷ್ಟ.ತಂದೆ, ತಾಯಿಯ ಪ್ರೋತ್ಸಾಹದಿಂದ ವಾದ್ಯ ಸಂಗೀತದ ಜೂನಿಯರನ್ನು ಸತ್ಯ ಭಾಮಾ ಟೀಚರ್ ಅವರೊಂದಿಗೆ ಕಲಿತು.ಸೀನಿಯರ್ ಸಂಗೀತ ತರಬೇತಿಯನ್ನು ಕಾಂಚಾನ ಈಶ್ವರ ಭಟ್ ಅವರೊಂದಿಗೆ ಕಲಿಯುತ್ತಿದ್ದಾರೆ.
ಬಾಲಚಂದ್ರರು ವಾದ್ಯ ಸಂಗೀತರಾನಾಗಿದ್ದುಕೊಂಡು ಮಡದಿ ಇಬ್ಬರು ಮುದ್ದು ಮಕ್ಕಳೊಂದಿಗೆ ಸಖ ಸಂಸಾರ ನಡೆಸುತ್ತಿದ್ದಾರೆ.ಒಟ್ಟಿನಲಿ ಬಾಲಚಂದ್ರರು ವಾದ್ಯ ಸಂಗೀತದಲ್ಲಿ ಇನ್ನಷ್ಟು ಸಾಧನೆ ಮಾಡಿ ಊರಿಗೆ ದೊಡ್ಡ ಹೆಸರು ತರಲಿ ಎಂಬುದೇ ನಮ್ಮ ಹಾರೈಕೆ

Related posts

Leave a Reply