Header Ads
Header Ads
Breaking News

ಎಲ್ಲರ ಗಮನ ಸೆಳೆಯುತ್ತಿರುವ ಆಳ್ವಾಸ್ ವಿಜ್ಞಾನಸಿರಿ

ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ ನಾಡು ನುಡಿಯ ಸಮ್ಮೇಳನ ನಾನಾ ಬಗೆಯ ಲೋಕವನ್ನು ತೆರೆದಿಟ್ಟಿದೆ. ಈ ನಡುವೆ ವಿದ್ಯಾರ್ಥಿಗಳು ಸಹಿತ ನುಡಿಸಿರಿಗೆ ಆಗಮಿಸುವ ಜನರಿಗೆ ಬಾಹ್ಯಾಕಾಶ ಪ್ರಪಂಚದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಕೆಲಸ ಆಳ್ವಾಸ್ ವಿಜ್ಞಾನಸಿರಿಯ ಮೂಲಕ ನಡೆಯುತ್ತಿದೆ.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ ಕೇವಲ ಸಾಹಿತ್ಯ, ಸಾಂಸ್ಕೃತಿಕ ಸಂಭ್ರಮಕ್ಕೆ ಸೀಮಿತವಾಗಿಲ್ಲ. ವೈಜ್ಞಾನಿಕ ಕ್ಷೇತ್ರಕ್ಕೂ ನುಡಿಸಿರಿಯಲ್ಲಿ ಪ್ರಾಧಾನ್ಯತೆಯಿದೆ. ಹೌದು, ನುಡಿಸಿರಿಯ ಆವರಣದಲ್ಲಿ ಆಳ್ವಾಸ್ ವಿಜ್ಞಾನಸಿರಿಯನ್ನು ಆಯೋಜಿಸಲಾಗಿದೆ. ಭಾರತ ಕಂಡ ಮೇರು ವಿಜ್ಞಾನಿ ಡಾ.ಎಪಿಜೆ ಕಲಾಂ ಅವರ ಸ್ಮರಣಾರ್ಥ ಆಯೋಜಿಸಲಾಗಿರುವ ವಿಜ್ಞಾನ ಸಿರಿಯು ಹೊಸ ಬಾಹ್ಯಾಕಾಶ ಲೋಕವನ್ನೇ ತರೆದಿಟ್ಟಿದೆ.ಇಸ್ರೋ ಮೂಲಕ ಬಾಹ್ಯಾಕಾಶಕ್ಕೆ ಉಡಾಯಿಸಲ್ಪಟ್ಟಿರುವ ವಿವಿಧ ಉಪಗ್ರಹಗಳು, ರಾಕೆಟ್ಗಳ ಮಾದರಿಯನ್ನು ವಿಜ್ಞಾನಸಿರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ಅವುಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಜಿಎಸ್‍ಎಲ್ವಿ 1,2,4, ಯುರೋಪ್ ನಿರ್ಮಿತ ಜಿಎಸ್‍ಎಲ್ವಿ ಆರ್ಯನ್ 5, ಯು.ಎಸ್ ನಿರ್ಮಿತ ಅಂತರಿಕ್ಷ ಶಟಲ್ ಮುಂತಾದ ಉಪಗ್ರಹಗಳ ಮಾದರಿಗಳು ವಿಜ್ಞಾನಸಿರಿಯಲ್ಲಿವೆ. ಜೊತೆಗೆ ದೂರಸಂಬಂಧಿ ಉಪಗ್ರಹಗಳಾದ ಮಾರ್ಸ್ ಆರ್ಬಿಟರ್ ಮಿಷನ್ ಸ್ಕೇಲ್ 1:5, ಐಎನ್‍ಆರ್‍ಎಸ್ ಐಎ ಸ್ಕೇಲ್ 1:10, ಇನ್ಸ್ಯಾಟ್ 3ಡಿ ಸ್ಕೇಲ್ 1:10, ಆಸ್ಟ್ರೋಸ್ಯಾಟ್ ಸ್ಕೇಲ್ 1:10, ಇನ್ಸ್ಯಾಟ್ 4ಎ ಸ್ಕೇಲ್ 1:10, ಪಿಎಸ್‍ಎಲ್ವಿ ಸ್ಕೇಲ್ 1:20, ಜಿಎಸ್‍ಎಲ್ವಿ 1, ಸ್ಕೇಲ್ 1 1:20, ಜಿಎಸ್‍ಎಲ್ವಿ ಎಂಕೆ3 ಸ್ಕೇಲ್ 1:20, ಮುಂತಾದ ಉಪಗ್ರಹ ಉಡಾವಣಾ ವಾಹನಗಳು ಕೂಡ ಪ್ರದರ್ಶನದಲ್ಲಿವೆ. ಇವುಗಳ ಜೊತೆಗೆ ಕಾರ್ಯವೈಖರಿಯ ಬಗ್ಗೆ ಕೂಡ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಲಾಗುತ್ತಿದೆ. ಇಸ್ರೋ ನಿರ್ಮಿತ ಕಿರುಚಿತ್ರವನ್ನೂ ಪ್ರದರ್ಶಿಸಲಾಗುತ್ತಿದೆ. ವಿದ್ಯಾರ್ಥಿಗಳು ಸಹಿತ ನುಡಿಸಿರಿಗೆ ಬಂದವರೆಲ್ಲರೂ ವಿಜ್ಞಾನಸಿರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಆಳ್ವಾಸ್ ವಿಜ್ಞಾನಸಿರಿ ಪ್ರದರ್ಶನ ಏರ್ಪಡಿಸಿರುವ ಸಭಾಂಗಣದೊಳಗೆ ಕಾಲಿಡುತ್ತಿದ್ದಂತೆ ಎಲ್ಲರನ್ನು ಸ್ವಾಗತಿಸುವುದು ಭಾರತ ಕಂಡ ಮೇರು ವಿಜ್ಞಾನಿ ದಿ.ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಪರೂಪದ ಕಲಾಕೃತಿ. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕ, ಚಿಕ್ಕಮಗಳೂರಿನ ಗಣೇಶ್ ಆಚಾರ್ಯ ಎಂ.ಆರ್. ಅವರು ಉಪ್ಪನ್ನು ಬಳಸಿಕೊಂಡು ರಚಿಸಿದ ಅಪರೂಪದ ಕಲಾಕೃತಿ ಎಲ್ಲರ ಗಮನಸೆಳೆಯುತ್ತಿದೆ.

Related posts

Leave a Reply