Header Ads
Header Ads
Header Ads
Breaking News

ಎಲ್ಲಾ ಆಯಾಮಗಳಲ್ಲಿ ರಾಮಮಂದಿರ ನಿರ್ಮಾಣದ ಚರ್ಚೆ ಮೂರು ದಿನಗಳ ಧರ್ಮ ಸಂಸದ್ ನಲ್ಲಿ ಸಂತರಿಂದ ಚರ್ಚೆ ಉಡುಪಿಯಲ್ಲಿ ಪೇಜಾವರ ಶ್ರೀ ಹೇಳಿಕೆ

ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರದ ಬಗ್ಗೆ ಉಡುಪಿಯಲ್ಲಿ ನಡೆಯುವ ಧರ್ಮ ಸಂಸದ್ ನಲ್ಲಿ ಸಂತರು ಎಲ್ಲಾ ಆಯಾಮದಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಕೃಷ್ಣ ಮಠದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಪೇಜವಾರ ಶ್ರೀಗಳು ಧರ್ಮ ಸಂಸತ್ತಿಗೆ ಉಡುಪಿಯಲ್ಲಿ ಎಲ್ಲಾ ಸಿದ್ಧತೆ ನಡೆದಿದೆ .ಮೂರು ಪ್ರಮುಖ ವಿಚಾರಗಳ ಚರ್ಚೆ ನಡೆಯಲಿದೆ. ರಾಮ ಮಂದಿರ ನಿರ್ಮಾಣ, ದೇಶದಲ್ಲಿ ಗೋಹತ್ಯಾ ನಿಷೇಧ, ಜಾತಿಗಳ ನಡುವಿನ ಅಸ್ಪೃಶ್ಯತಾ ನಿವಾರಣೆ ಧರ್ಮ ಸಂಸತ್ತಿನ ಚರ್ಚೆಯ ಪ್ರಮುಖ ಅಂಶಗಳು. ದೇಶದ ಉದ್ದಗಲದ ಸಂತರು ನಿರ್ಣಯ ಕೈಗೊಳ್ಳಲಿದ್ದಾರೆ. ರಾಮಜನ್ಮಭೂಮಿ ಸಮಸ್ಯೆ ನಿವಾರಣೆಗೆ ಮೂರು ಅವಕಾಶಗಳಿವೆ .ಸರ್ಕಾರದ ನೇತೃತ್ವದಲ್ಲಿ ಸಂಧಾನ ಮಾಡಬಹುದು.ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಕಾಯಬಹುದು.ವಿಶೇಷ ವಿಧೇಯಕ ಮಂಡಿಸಿ ಸಮಸ್ಯೆ ನಿವಾರಿಸಬಹುದೆಂದು ಪೇಜಾವರ ಶ್ರೀಗಳು ತಿಳಿಸಿದರು.

Related posts

Leave a Reply