Header Ads
Breaking News

ಎಲ್ಲೂರಿನಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ನಾವು ಸಿನಿಮಾಗಳಲ್ಲಿ ಹೊಡೆದಾಡುವುದು, ನೃತ್ಯ ಮಾಡುವುದು, ಪದ್ಯ ಹಾಡುವುದು ಹೀಗೆ ರೀಲ್‍ಗಳಲ್ಲಿ ಹೀರೋಗಳಾಗಿ ಮಿಂಚಬಹುದಷ್ಟೆ, ಆದರೆ ನೀವುಗಳು ಪ್ರತೀಯೊಂದು ಸಾಧನೆಗಳನ್ನು ಲೈವ್ ಆಗಿ ಮಾಡುತ್ತಿರುವುದರಿಂದ ನಿಜವಾದ ಹೀರೋಗಳು ನೀವು ಎಂಬುದಾಗಿ ತುಳು ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್ ಹೇಳಿದ್ದಾರೆ.

ಅವರು ಎಲ್ಲೂರು ಪ್ರೇಂಡ್ಸ್ ಎಲ್ಲೂರು ಗ್ರಾ.ಪಂ. ಮೈದಾನದಲ್ಲಿ ಆಯೋಜಿಸಿದ ಹೊನಲು ಬೆಳಕಿನ 40 ಗಜಗಳ ಕ್ರಿಕೆಟ್ ಪಂದ್ಯಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ಪಂದ್ಯಾಕೂಟವನ್ನು ಮೀನುಗಾರ ಮುಖಂಡ ಯಶ್‍ಪಾಲ್ ಸುವರ್ಣ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಎಲ್ಲೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಯಶವಂತ ಶೆಟ್ಟಿ ವಹಿಸಿದ್ದು, ಸಂಘಟಕ ಕಿರಣ್ ಭಟ್, ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್, ನಿವೃತ್ತ ಪೊಲೀಸ್ ಅಧಿಕಾರಿ ವಾಮನ್, ಹಿಂದೂ ಸಂಘಟನೆಯ ಮುಖಂಡ ರಾಜೇಶ್ ಕೋಟ್ಯಾನ್ ಮುಂತಾದವರಿದ್ದರು

Related posts

Leave a Reply

Your email address will not be published. Required fields are marked *