Breaking News

ಎಲ್ಲೂರು ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ, ಸೊರಕೆ ಕಾರ್ಯಕ್ರಮದಲ್ಲಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಲು ಬಂದ ಕಾಪು ಶಾಸಕ ಸೊರಕೆಯವರಲ್ಲಿ ಬಿಜೆಪಿ ಕಾರ್ಯಕರ್ತನೋರ್ವ ಏರು ಧ್ವನಿಯಲ್ಲಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಹೊಕೈ ನಡೆದು ತಾತ್ಕಾಲಿಕ ಶಮನಗೊಂಡಿದ್ದರೂ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತ್ತಿದೆ.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಶಾಸಕರಾಗಿದ್ದ ಸಂದರ್ಭ ಎಲ್ಲೂರು ಗರೋಡಿ ರಸ್ತೆಗೆ ಗುದ್ದಲಿ ಪೂಜೆ ನಡೆಸಿದ್ದರಾದರೂ ಕಾಮಗಾರಿಗೆ ಚಾಲನೆ ದೊರೆತಿಲ್ಲ. ಆ ಬಳಿಕ ದಿನದಲ್ಲಿ ಶಾಸಕರಾಗಿ ಆಯ್ಕೆಯಾದ ವಿನಯ ಕುಮಾರ್ ಸೊರಕೆ ಗುದ್ದಲಿ ಪೂಜೆ ನಡೆಸಿದರಾದರೂ ಪರಿಸ್ಥಿತಿ ಯಥಾಸ್ಥಿತಿ. ಆ ಬಳಿಕ ಯುಪಿಸಿಎಲ್ ಮತ್ತೆ ಅದೇ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿ ೧೮ ಲಕ್ಷ ರೂಪಾಯಿ ಅನುದಾನ ಎಂಬುದಾಗಿ ಘೋಷಣೆ ಮಾಡಿದ್ದು ಕಾಮಗಾರಿ ಆರಂಭಿಸಿಲ್ಲ. ಆದರೆ ಮತ್ತೆ ನಾಲ್ಕನೇ ಬಾರಿಗೆ ಅದೇ ಗರೋಡಿ ರಸ್ತೆಗೆ ಸೊರಕೆ ೫ ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡುವುದಾಗಿ ಗುದ್ದಲಿ ಪೂಜೆ ನಡೆಸಲು ಆಗಮಿಸಿದ್ದರು. ಇನ್ನೇನು ಗುದ್ದಲಿ ಪೂಜೆ ನಡೆಯುತ್ತೆ ಎಂದಾಗ, ಸ್ಥಳೀಯ ಬಿಜೆಪಿ ಕಾರ್ಯಕರ್ತನೋರ್ವ ಮಾತನಾಡಿ ನಿರಂತರವಾಗಿ ಗುದ್ದಲಿ ಪೂಜೆ ಮಾತ್ರ ನಡೆಯುತ್ತಿದೆ, ಕಾಮಗಾರಿ ನಡೆಯುವಂತೆ ಕಾಣುತ್ತಿಲ್ಲ ಎಂಬುದಾಗಿ ಏರುಧ್ವನಿಯಲ್ಲಿ ಮಾತನಾಡಿದಾಗ, ಆಕ್ರೋಶಿತರಾದ ಸೊರಕೆ ಅದೇ ಧ್ವನಿಯಲ್ಲಿ ಆತನನ್ನು ಗದರಿಸಿ ಕಳೆದ ಹತ್ತು ವರ್ಷಗಳಲ್ಲಿ ನಿಮ್ಮದೇ ಪಕ್ಷ ಆಡಳಿತದಲ್ಲಿ ಇತ್ತಲ್ಲ ಆಗ ಯಾಕೆ ನೀನು ಹೀಗೆ ಮಾತನಾಡಿಲ್ಲ ಎಂದಾಗ ಮಾತಿಗೆ ಮಾತು ಬೆಳೆಯುತ್ತಿದಂತೆ. ಸಹನೆ ತಪ್ಪಿದ ಕಾಂಗ್ರೆಸ್ ಕಾರ್ಯಕರ್ತರು ಆ ಯುವಕನನ್ನು ತಳ್ಳಾಡುವ ಮೂಲಕ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮಟ್ಟಕ್ಕೆ ಹೋಗಿತ್ತು.
ಆ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರು ಅವರನ್ನು ಸಮಾಧಾನ ಮಾಡುವ ಮೂಲಕ ಸದ್ಯಕ್ಕೆ ಪರಿಸ್ಥಿತಿ ತಣ್ಣಗಾಗಿದೆ. ಈ ಬಗ್ಗೆ ತಮ್ಮ ಕಾರ್ಯಕರ್ತನಿಗೆ ಕಾಂಗ್ರೆಸ್ಸಿಗರು ಹಲ್ಲೆ ಮಾಡಿದ್ದಾರೆ. ಅದೂ ಕೂಡಾ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಶಾಸಕರ ಮುಂಭಾಗದಲ್ಲೇ ನಡೆದ ಈ ಕೃತ್ಯ ಖಂಡನೀಯ, ಈ ಬಗ್ಗೆ ಪಕ್ಷದ ನಾಯಕರ ಅಭಿಪ್ರಾಯದಂತೆ. ಸುದ್ಧಿಗೋಪ್ಠಿ ನಡೆಸಿ ತಮ್ಮ ಅಭಿಪ್ರಾಯ ಮಂಡಿಸುವುದಾಗಿ ಎಲ್ಲೂರು ಗ್ರಾ. ಪಂ. ಉಪಾಧ್ಯಕ್ಷ ಜಯಂತ್ ಭಟ್ ತಿಳಿಸಿದ್ದಾರೆ.

Related posts

Leave a Reply