Header Ads
Header Ads
Header Ads
Breaking News

ಎಳ್ಳಾಮಾವಸ್ಯೆಗೂ ತಟ್ಟಿದ ಗ್ರಹಣ ಬಾಧೆ : ಬಿಕೋ ಎನ್ನುತ್ತಿರುವ ಹೆಜಮಾಡಿ ಕಡಲತೀರ

ಪಡುಬಿದ್ರಿ: ಹೆಜಮಾಡಿ ಜನತೆಗೆ ವಾರ್ಷಿಕ ಜಾತ್ರೆಯ ಅನುಭವ ನೀಡುತ್ತಿದ್ದ ಎಳ್ಳಾಮಾವಸ್ಯೆ, ಸೂರ್ಯ ಗ್ರಹಣದ ಹಿನ್ನಲೆಯಲ್ಲಿ ತೀರ್ಥ ಸ್ನಾನಕ್ಕೆ ಜನ ಆಗಮಿಸದ್ದರಿಂದ ಈ ಬಾರಿಯ ಎಳ್ಳಾಮಾವಸ್ಯೆ ಸಪ್ಪೆಯಾಗಿದೆ.

ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ಕೀರ್ತನ್, ಪ್ರತೀ ವರ್ಷವೂ ಮುಂಜಾನೆಯಿಂದಲೇ ಊರು ಹಾಗೂ ದೂರದೂರಿಂದ ಸಹಸ್ರಾರು ಮಂದಿ ಆಗಮಿಸಿ ತೀರ್ಥಸ್ನಾನ ಪೊರೈಸುತ್ತಿದ್ದು, ತೀರ್ಥಸ್ನಾನಕ್ಕಾಗಿ ಈ ಭಾಗದ ನಮ್ಮ ಮನೆ ಮನೆಗೆ ನೆಂಟರಿಷ್ಟರು ಆಗಮಿಸಿ ತೀರ್ಥಸ್ನಾನ ಮಾಡಿ ಮರುದಿನ ನಿರ್ಗಮಿಸುವುದು ನಡೆದು ಬಂದ ಪದ್ಧತಿ, ಈ ದಿನವನ್ನು ನಾವು ಊರಿನ ಜಾತ್ರೆಯ ರೀತಿಯಲ್ಲಿ ಆಚರಿಸುತ್ತೇವೆ, ಆದರೆ ಈ ಬಾರಿ ಗ್ರಹಣದ ಹಿನ್ನಲೆಯಲ್ಲಿ ತೀರ್ಥಸ್ನಾನಕ್ಕೆ ಜನ ಬಾರದಿರುವುದರಿಂದ ಜಾತ್ರೆಯ ಕಲೆ ಇಲ್ಲವಾಗಿದೆ, ಅದಲ್ಲದೆ ಈ ಎಳ್ಳಾಮಾವಸ್ಯೆ ಜಾತ್ರೆಗೆ ಸಹಸ್ರಾರು ಮಂದಿ ಆಗಮಿಸುತ್ತಿದ್ದರಿಂದ ಅಂಗಡಿ ಮುಗ್ಗಟ್ಟುಗಳು ರಸ್ತೆಯುದ್ದಕ್ಕೂ ಇದ್ದು, ವ್ಯಾಪಾರ ಬಾರೀ ಜೋರಾಗಿ ನಡೆಯುತ್ತಿತ್ತು, ಆದರೆ ಈ ಬಾರಿ ಆಗಮಿಸಿದ ವ್ಯಾಪಾರಿಗಳು ಕೂಡಾ ತೀರ ನಿರಾಶೆ ಅನುಭವಿಸುವಂತ್ತಾಗಿದೆ.

Related posts

Leave a Reply

Your email address will not be published. Required fields are marked *