Header Ads
Header Ads
Header Ads
Breaking News

“ಎಸಳ್” ತುಳು ಟೆಲಿ ಚಿತ್ರಕ್ಕೆ ಮುಹೂರ್ತ ಸಮಾರಂಭ ನಂತೂರು ಬಬ್ಬುಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ

ವಾಸುದೇವ ಪೊನ್ನಕ್ಕ ಪ್ರತಿಷ್ಠಾನ ವತಿಯಿಂದ ವಕ್ರತುಂಡ ಸಿನಿ ಕ್ರಿಯೇಶನ್ಸ್‌ರವರ ಆರ್.ಪಿ ಪ್ರೆಸೆಂಟ್ಸ್ ಎಸಳ್ ತುಳು ಟೆಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ನಂತೂರು ಶ್ರೀ ಬಬ್ಬುಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಾಟಕ, ಚಲನಚಿತ್ರ ನಿರ್ದೇಶಕ ತು ಳುನಾಡ ರತ್ನ ದಿನೇಶ್ ಅತ್ತಾವರ್, ಎಸಳ್ ಟೈಟಲ್ ಗೀತೆಯ ಸಿಡಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ತದ ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾದಿದ ತು ಳು ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್ ಮಾತನಾದ್ಡಿ, ತು ಳು ಚಲನಚಿತ್ರ ರಂಗ ಬೆಳೆಯುವಲ್ಲಿ ಇಂತಹ ಟೆಲಿ ಚಿತ್ರಗಳು ಪೂರಕವಾಗಿ ಕೆಲಸಮಾಡುತ್ತದೆ ಎಂದು ಹೇಳಿದರು.

ಕರಾವಳಿ ನೃತ್ಯ ಅಕಾಡೆಮಿ ಅಧ್ಯಕ್ಷ ರಾಜೇಶ್ ಕಣ್ಣೂರು, ಉಡುಪಿ-ಮಂಗಳೂರು ಸಂಗೀತ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷೆ ಮಲ್ಲಿಕಾ ಸುನಿಲ್, ಟೈಗರ್ ಕ್ಯಾಂಪಸ್ ಸಂಚಾಲಕ ಟೈಗರ್ ರಾಜ್ ಮೊದಲಾದವರು ಉಸ್ಥ್ತಿತರಿದ್ದರು. ತು ಳುನಾಡ ಕಲಾಬ್ರಹ್ಮೆ ಹಾಗೂ ಎಸಳು ತು ಳು ಟೆಲಿ ಚಿತ್ರದ ನಿರ್ದೇಶಕ ಜಿ.ಎ.ಬೋಳೂರು, ಸ್ವಾಗತಿಸಿ, ವಂದಿಸಿದರು.

ವರದಿ: ಶರತ್ ಸಾಲಿಯಾನ್, ಮಂಗಳೂರು

Related posts

Leave a Reply