Breaking News

ಎಸಿ ಆದೇಶ ಅಸಿಂಧು: ಪುತ್ತೂರು ಕೋರ್ಟ್ ತೀರ್ಪು

ಮಂಗಳೂರು: ಪುತ್ತೂರಿನ ಸವಣೂರಿನಲ್ಲಿ ನಡೆದಿದ್ದ ವಿರಾಟ ಹಿಂದೂ ಸಮಾವೇಶಕ್ಕೆ ಜಗದೀಶ್ ಕಾರಂತ್ ಬರುವ ಪೂರ್ವ ಮುಚ್ಚಳಿಕೆ ಬರೆಸಿಕೊಳ್ಳುವ ಎಸಿ ಆದೇಶವನ್ನು ಪುತ್ತೂರಿನ ಐದನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಅಸಿಂಧುಗೊಳಿಸಿದೆ.
ಹಿಂದೂ ಜಾಗರಣೆ ವೇದಿಕೆಯ ದಕ್ಷಿಣ ಪ್ರಾಂತ್ಯ ಮುಖಂಡ ಜಗದೀಶ್ ಕಾರಂತ್ ಸವಣೂರಿಗೆ ಬಂದರೆ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಎಂಬ ಕಾರಣದಿಂದ ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ನೀಡಿದ ವರದಿ ಆಧರಿಸಿ ೧೦ ಲಕ್ಷ ರೂ. ಬಾಂಡ್ ಮುಚ್ಚಳಿಕೆ ಬರೆದುಕೊಡುವಂತೆ ಎಸಿ ನೋಟಿಸ್ ಜಾರಿ ಮಾಡಿದ್ದರು.
ನೋಟಿಸ್ ನೀಡಿದ್ದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಸಹಾಯಕ ಆಯುಕ್ತರಿಗೆ ವಾರಂಟ್ ನೀಡಲು ಅಧಿಕಾರ ಇಲ್ಲ. ನೇರವಾಗಿ ವಾರಂಟ್ ನೀಡಿರುವುದು ಅಸಿಂಧು ಎಂದು ವಾದಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ಅಸಿಂಧು ಎಂದು ತೀರ್ಪು ನೀಡಿದೆ.

Related posts

Leave a Reply