Header Ads
Header Ads
Breaking News

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ವಿಟ್ಲದ ವಿಠಲ್ ಶಾಲೆಗೆ ದಾಖಲೆಯ ಫಲಿತಾಂಶ ಸತತ 15ನೇ ಬಾರಿ ಶೇ. 100 ಫಲಿತಾಂಶ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿಶಿಷ್ಠ ಸಾಧನೆ

ವಿಟ್ಲದ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯೂ ಸತತ 15ನೇ ಬಾರಿ ಶೇ.100 ಫಲಿತಾಂಶ ದಾಖಲಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ.114 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದು 5ಬಾರಿ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 19 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 43 ವಿದ್ಯಾರ್ಥಿಗಳು ಎ ಫ್ಲಸ್ ಗಳಿಸಿದ್ದು, 33 ವಿದ್ಯಾರ್ಥಿಗಳು ಎ ಶ್ರೇಣಿಯನ್ನು ಪಡೆದಿದ್ದಾರೆ.

ಸಮನ್ವಿತ 619 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ ವಿಷಯಗಳಲ್ಲಿ ಪೂರ್ಣ ಅಂಕಗಳನ್ನು ಪಡೆದಿರುತ್ತಾಳೆ. ಮರಿಯಮ್ಮಥುಲ್ ಸಮ್ಲ 617 ಅಂಕ ಗಳಿಸಿದ್ದು, ಕನ್ನಡ, ಹಿಂದಿ, ಸಮಾಜ ವಿಷಯದಲ್ಲಿ ಪೂರ್ಣ ಅಂಕ ಪಡೆದಿರುತ್ತಾಳೆ. ಇಲಾಖೆ ನಡೆಸುವ ಕ್ಯುಪಿಐ ಅಲ್ಲಿ ಶಾಲೆ ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಎಲ್ಲಾ ನಿರೀಕ್ಷೆ ನಮಗೆ ಇದೆ ಎಂದು ವಿಠಲ ಜೇಸಿಸ್ ಎಜ್ಯುಕೇಶನಲ್ ಸೊಸೈಟಿ ಅಧ್ಯಕ್ಷ ಎಲ್. ಎನ್. ಕೂಡೂರು ಹೇಳಿದರು. ಶಾರಧಿ ಎಸ್.ಕೆ, ವರಲಕ್ಷ್ಮೀ ಮಯೂರಿ, ಈಶ್ವರ ಪ್ರಸನ್ನ, ಸ್ನೇಹ, ಪಾರ್ಥ ಪ್ರವೀಣ್ ಶೆಟ್ಟಿ, ತೀಶಾಲ ರೈ, ಸಮರ್ಥ ಕುಮಾರ್ ಶೆಟ್ಟಿ, ಎಂ ಆದರ್ಶ ಆರ್ ನಾಯಕ್, ಶಾರಧಿ, ಶ್ರೇಯಾ, ಆದಿತ್ಯ ಅನುಶ್ರೀ, ಅನುಷ ಪಿ, ಮಹಮ್ಮದ್ ರಿಯಾಜ್, ತನ್ವಿ ಬಿ.ವಿ, ಗಣೇಶ್ ಜೆ ಬಾಳಿಗ, ರನಿತಾ ಆರ್, 600ಕ್ಕಿಂತಲೂ ಅಧಿಕ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಶ್ರೀಧರ ಕೊಡಕ್ಕಲ್, ಪ್ರಾಂಶುಪಾಲ ಜಯರಾಮ ರೈ, ಉಪಪ್ರಾಂಶುಪಾಲೆ, ಶಾಲಿನಿ ನೋಂಡಾ, ಶಿಕ್ಷಕರಾದ ಐಡ ಲಸ್ರಾದೋ, ಗುರುವಪ್ಪ ನಾಯ್ಕ, ಎಮಿಲ್ಡಾ ಸೀಮಾ ಸಲ್ಡಾನಾ, ಗೀತಾ ಕೆ, ಗೀತಾ ಆರ್, ಸವಿತಾ ಯು. ಎಂ. ಅಭಿನಂದಿಸಿದ್ದಾರೆ.

07ವಿಟಿಎಲ್6: ಸಮನ್ವಿತ 619

07ವಿಟಿಎಲ್7: ಮರಿಯಮ್ಮಥುಲ್ ಸಮ್ಲ 617
07ವಿಟಿಎಲ್8: ಶಾರಧಿ ಎಸ್.ಕೆ 615
07ವಿಟಿಎಲ್9: ವರಲಕ್ಷ್ಮೀ ಪಿ.ಎಸ್ 613

ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply