Header Ads
Header Ads
Breaking News

ಎಸ್‌ಡಿಎಂಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಪತ್ರಿಕಾ ಬರವಣಿಗೆ ಕುರಿತು ಉಪನ್ಯಾಸ

ಉಜಿರೆ :  ದಿನನಿತ್ಯದ ಆಗುಹೋಗುಗಳನ್ನು ಹಾಗೂ ನಮ್ಮ ಸುತ್ತಮತ್ತಲುಇರುವ ವಿಷಯಗಳನ್ನೇ ಭಿನ್ನವಾಗಿ ಗ್ರಹಿಸಿ ಅದನ್ನು ಅಕ್ಷರಕ್ಕಿಳಿಸುವ ಸಾಮರ್ಥ್ಯವನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿಷಯವೊಂದರ ವಿವಿಧ ಆಯಾಮಗಳನ್ನು ಸೂಕ್ಷ್ಮವಾಗಿ ಅಥೈಸಿಕೊಳ್ಳುವ ದೃಷ್ಟಿಕೋನವನ್ನು ಭವಿಷ್ಯದ ಬರಹಗಾರರು ಮೈಗೂಡಿಸಿಕೊಳ್ಳಬೇಕುಎಂದು ಮಂಜುವಾಣಿ ಪತ್ರಿಕೆಯ ಉಪ ಸಂಪಾದಕ ಚಂದ್ರಶೇಖರಅಂತರ ಹೇಳಿದರು.
ಅವರುಉಜಿರೆಯಎಸ್‌ಡಿಎಂಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ಪತ್ರಿಕಾ ಬರವಣಿಗೆ ಎಂಬಅತಿಥಿಉಪನ್ಯಾಸಕಾರ್ಯಕ್ರಮದಲ್ಲಿ ಸಂಪನ್ಮೂಲ ಭಾಷಣ ಮಾಡಿದರು.ಬರವಣಿಗೆ ಲೋಕದಲ್ಲಿ ಪರಿಪಕ್ವ ಹೊಂದುವ ಪ್ರಕ್ರಿಯೆಯಆರಂಭಿಕ ಹಂತಅಂಬೆಗಾಲಿಡಲುಕಲಿಯುವ ಮಗುವಿನ ಪ್ರಯತ್ನದಂತೆಇರಬೇಕು.ಸತತ ಪ್ರಯತ್ನ ಮತ್ತು ಮನಮುಟ್ಟುವ ಬರವಣಿಗೆಯ ಕಲೆ ತನ್ನದಾಗಿಸಿಕೊಳ್ಳುವ ಛಲ ಇರಲೇಬೇಕು.ಸಾಮಾನ್ಯ ವಿಷಯವನ್ನೂಆಸಕ್ತಿದಾಯಕವಾಗಿಓದುಗರಿಗೆ ಮುಟ್ಟಿಸುವ ಕಲೆ ನಿರಂತರ ಬರವಣಿಗೆಯಅಭ್ಯಾಸದಿಂದಷ್ಟೇ ಸಾಧ್ಯಎಂದು ಹೇಳಿದರು.
ಓದು ಬರಹಕ್ಕೆಅಡಿಪಾಯ.ನಿರಂತರಓದು ಬರಹಗಾರನಕಾಯಕಕ್ಕೆ ವಿವಿಧ ವಸ್ತುವಿಷಯಗಳನ್ನು ಒದಗಿಸಿಕೊಡುತ್ತದೆ.ಓದಿನ ಹವ್ಯಾಸ ಬರವಣಿಗೆಯಕುರಿತು ಒಳನೋಟಗಳನ್ನು ತಿಳಿಸಿಕೊಡುತ್ತದೆ.ಪತ್ರಿಕೋದ್ಯಮ ವಿದ್ಯಾರ್ಥಿ ಬರೆಯುವ ಮುನ್ನಉತ್ತಮಒದುಗನಾಗುವುದು ಮುಖ್ಯಎಂದರು.ಪತ್ರಿಕೋದ್ಯಮ ವಿದ್ಯಾರ್ಥಿನಿ ದಶಮಿಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಸಂಯೋಜಕಿ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿಗೀತಾಏ.ಜೆ.ವಂದಿಸಿದರು.

Related posts

Leave a Reply

Your email address will not be published. Required fields are marked *