Header Ads
Header Ads
Breaking News

ಎಸ್‌ಡಿಎಂ ಕಾಲೇಜಿನ ವಾರ್ಷಿಕ ಕ್ರೀಡಾಕೂಟ : ಸೋನಿಯಾ ವರ್ಮರಿಂದ ಚಾಲನೆ

ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರಿಡಾಂಗಣದಲ್ಲಿ ಎಸ್.ಡಿ.ಎಂ ಸಂಸ್ಥೆ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಇತ್ತೀಚೆಗೆ ಚಾಲನೆಯನ್ನು ನೀಡಲಾಯಿತು. ಕ್ರೀಡಾ ಧ್ವಜಾರೋಹಣದ ಮೂಲಕ ಸೋನಿಯಾ ವರ್ಮ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಾಲಿಬಾಲ್ ಮತ್ತು ಸೆಟ್‌ಬಾಲ್‌ನಲ್ಲಿ ಚಿನ್ನದ ಪದಕ ಗೆದ್ದ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ಕ್ರೀಡಾ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.ಇದಕ್ಕೂ ಮುಂಚೆ ನಡೆದ ಪಥಸಂಚಲನದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿವಿಧ ಥೀಮ್‌ಗಳ ಮೂಲಕ ಗಮನ ಸೆಳೆದರು.

ದೇಶಪ್ರೇಮ, ಸೈನಿಕರ ಕುರಿತ ಕಾಳಜಿ, ಯುದ್ಧವಿಮಾನಗಳೊಂದಿಗಿನ ರಕ್ಷಣಾ ತಂತ್ರಗಾರಿಕೆ ಸೇರಿದಂತೆ ಪ್ರಚಲಿತ ವಿದ್ಯಮಾನಗಳನ್ನು ದೃಷ್ಟಿಯಲ್ಲಿರಿಸಿಕೊಂಡ ಥೀಮ್‌ನೊಂದಿಗೆ ವಿದ್ಯಾರ್ಥಿ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದವು.ಆಯೋಜಿಸಿದ್ದ ಪಥಸಂಚಲನ ಸ್ಪರ್ಧೆಯಲ್ಲಿ ಅಂತಿಮ ವರ್ಷದ ಸಿ ವಾಣಿಜ್ಯ ವಿಭಾಗದವರು ಪ್ರಥಮ ಸ್ಥಾನವನ್ನು, ಅಂತಿಮ ವರ್ಷದ ಬಿ ವಿಜ್ಞಾನ ವಿಭಾಗದವರು ದ್ವಿತಿಯ ಸ್ಥಾನವನ್ನು, ಅಂತಿಮ ವರ್ಷದ ಬಿ ವಾಣಿಜ್ಯ ವಿಭಾಗ ಮತ್ತು ಸ್ನಾತಕೋತ್ತರ ವಾಣಿಜ್ಯ ಕೇಂದ್ರ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ಎನ್.ಕೇಶವ್, ಹಿರಿಯ ಕ್ರಿಡಾಪಟು ಗುರುರಾಜ್ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *