Header Ads
Breaking News

ಎಸ್‌ವೈಸ್ ಕೆಸಿರೋಡ್ ಸೆಂಟರ್‌ನ ಆಶ್ರಯದಲ್ಲಿ ಐದು ಜೋಡಿಗೆ ಉಚಿತ ಸಾಮೂಹಿಕ ವಿವಾಹ

ಎಸ್‌ವೈಸ್ ಕೆಸಿರೋಡ್ ಸೆಂಟರ್‌ನ ಎಂಟನೇ ವರ್ಷದ ಐದು ಜತೆ ಉಚಿತ ಸಾಮೂಹಿಕ ವಿವಾಹವು ಕೋಟೆಕಾರ್ ನೂರ್ ಮಹಲ್‌ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಸ ಅದಿಯಾ ಕಾಲೇಜು ಪ್ರೊಫೆಸರ್ ಹುಸೈನ್ ಸಅದಿ ಕೆ.ಸಿರೋಡ್ ಮಾತನಾಡಿ, ಕೆಲವು ಸಮಸ್ಯೆ ಗಳಿಂದ ವಿವಾಹ ವಾಗದೇ ಉಳಿದಿರುವ ಹೆಣ್ಣು ಮಕ್ಕಳಿಗೆ ವಿವಾಹ ಮಾಡಿ ಕೊಡುವುದು ಉತ್ತಮ ಕಾರ್ಯ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕರೆ ನೀಡಿದರು.
ಐವರು ವಧೂವರರು ದಾಂಪತ್ಯ ಜೀವನ ಕ್ಕೆ ಕಾಲಿಟ್ಟರು. ಎಸ್ ವೈಎಸ್ ಕೆಸಿರೋಡ್ ಸೆಂಟರ್ ಮ್ಯಾರೇಜ್ ಸೆಲ್ ಸಂಚಾಲಕ ಉಮರ್ ಮಾಸ್ಟರ್ ಅತಿಥಿ ಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ನುಡಿದರು. ಕಾರ್ಯಕ್ರಮ ದಲ್ಲಿ ಸಿಟಿಎಂ ಸೆಯ್ಯದ್ ಮಹಮ್ಮದ್ ಸಲೀಂ ತಂಙಳ್,ಅಬ್ದುಲ್ ರಶೀದ್ ಝೈನಿ,ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *