Breaking News

ಎಸ್‌ಸಿ/ಎಸ್‌ಟಿ ಕಾಲನಿಗೆ ನೀರು ಬಂದ್ ಬಿಲ್ ಹಾಜರು,  ಇರುವೈಲು ಪಂಚಾಯತ್ ಮುಂಭಾಗ ಧರಣಿ


ಕುಡಿಯುವ ನೀರಿನ ಅವ್ಯವಸ್ಥೆ, ಉದ್ಯೋಗ ಖಾತರಿ ಯೋಜನೆಯ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಹಾಗೂ ಎಸ್‌ಸಿ/ಎಸ್‌ಟಿ ಮೀಸಲು ನಿಧಿಯನ್ನು ಖರ್ಚು ಮಾಡದಿರುವ ವಿರುದ್ಧ ಇರುವೈಲುನಲ್ಲಿ ಪ್ರತಿಭಟನೆ ನಡೆಯಿತು.
ಇನ್ನು ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಮತ್ತು ದಲಿತ ಹಕ್ಕುಗಳ ಹೋರಾಟ ಗ್ರಾಮ ಸಮಿತಿಗಳ ನೇತೃತ್ವದಲ್ಲಿ ಇರುವೈಲು ಗ್ರಾಮ ಪಂಚಾಯತ್ ಕಛೇರಿ ಎದುರು ಮಂಗಳವಾರ ಹಗಲು ರಾತ್ರಿ ಹೋರಾಟ ಆರಂಭಗೊಂಡಿತು. ಈ ವೇಳೆ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ, ೨೦೧೧ರಲ್ಲಿ ಎಸ್‌ಸಿ/ಎಸ್‌ಟಿ ಅನುದಾನದಲ್ಲಿ ೫೦,೦೦೦ವನ್ನು ಖರ್ಚು ಮಾಡಲಾಗಿದೆ. ಆದರೆ ೨೦೧೫-೧೬ರಲ್ಲಿ ಯಾವುದೇ ಅನುದಾನವನ್ನು ಬಿಡುಗಡೆಗೊಳಿಸಿಲ್ಲ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಲ್ಲ ಆದರೆ ಎಸ್‌ಸಿ/ಎಸ್‌ಟಿಯವರ ಕಾಲನಿಗಳಲ್ಲಿರುವ ಕುಟುಂಬಗಳು ಬಳಸುವ ನೀರಿನ ಸಂಪರ್ಕವನ್ನು ಪಂಚಾಯತ್ ಕಡಿತಗೊಳಿಸಿ ಬಿಲ್ ಕಲೆಕ್ಷನ್‌ಗೆ ನೊಟೀಸ್ ಕಳುಹಿಸುವುದು ನಾಚಿಕೆಗೇಡು ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಅಧ್ಯಕ್ಷ ಆನಂದ ಪೂಜಾರಿ, ಕಾರ್ಯದರ್ಶಿ ಶೀನ ನಾಯ್ಕ್, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ್ ಆಚಾರ್ಯ, ಕಾರ್ಯದರ್ಶಿ ದಿನೇಶ್ ಪೂಜಾರಿ, ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ರಾಜೇಶ್ ನಾಯ್ಕ್ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply