Header Ads
Header Ads
Breaking News

ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರ ರಜತ ಸಂಭ್ರಮ:ಮಂಗಳೂರು ನೆಹರೂ ಮೈದಾನದಲ್ಲಿ ಚಪ್ಪರ ಮುಹೂರ್ತ

ಸಹಕಾರ ರತ್ನ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಅವರು ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅವಧಿಯ ’ರಜತ ಸಂಭ್ರಮ’ ಹಾಗೂ ನವೋದಯ ಸ್ವ ಸಹಾಯ ಸಂಘಗಳ ವಿಂಶತಿ ಸಮಾರಂಭದ ಚಪ್ಪರ ಮುಹೂರ್ತವು ಮಂಗಳೂರು ನೆಹರೂ ಮೈದಾನದ ಫುಟ್ಬಾಲ್ ಗ್ರೌಂಡ್ ನಲ್ಲಿ ನಡೆಯಿತು.

ಚಪ್ಪರ ಮುಹೂರ್ತ ಕಾರ್ಯಕ್ರಮಕ್ಕೆ ಮೇಯರ್ ಭಾಸ್ಕರ್ ಮೊಯಿಲಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಇವರು ರಾಜೇಂದ್ರ ಕುಮಾರ್ ಅವರು ಬಡವರಿಗೆ ಕಾಳಜಿ ಇದ್ದವರು, ಇವರ25 ವರ್ಷಗಳ ಕಾಲ ಅಧ್ಯಕ್ಷರಾಗಿ ಅನೇಕ ಉತ್ತಮ ಕೆಲಸ ಮಾಡಿದ್ದರೆ ಇವರ ಅಭಿನಂದನ ಕಾರ್ಯಕ್ರಮ ಮಾಡುವುದು ನಮ್ಮ ಕರ್ತವ್ಯ ಎಂದರು.ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿ’ಸೋಜ ಮಾತನಾಡಿ ಯಾವುದೇ ಬಬ್ಬ ವ್ಯಕ್ತಿ ನಮ್ಮ ಜೀವನವನ್ನು ಸಮಾಜಕ್ಕೆ ಮುಡಿಪಾಗಿರಿಸಿದವರಲ್ಲಿ ರಾಜೇಂದ್ರ ಕುಮಾರ್ ಅಗ್ರಗಣ್ಯರು ಎಂದರು.ಎಸ್ ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಕಾರ್ಯಕ್ರಮದ ಕಾರ್ಯದರ್ಶಿ ಭಾಸ್ಕರ ಕೋಟ್ಯಾನ್, ಮತ್ತು ಗಣ್ಯರು ಉಪಸ್ಥಿತರಿದ್ದರು.

Related posts

Leave a Reply