Header Ads
Header Ads
Header Ads
Breaking News

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್‌ಗೆ ಅಭಿನಂದನೆ ಸಹಕಾರ ಮಾರಾಟ ಮಹಾಮಂಡಳಿ ಅಧ್ಯಕ್ಷರಾಗಿ ಆಯ್ಕೆ ಹಿನ್ನಲೆ ಕೊಡಿಯಾಲ್‌ಬೈಲ್ ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಸಮಾರಂಭ

 ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಸ್ತ ಸಹಕಾರಿ ಬಂಧಗಳ ಪರವಾಗಿ ಅಭಿನಂದನಾ ಕಾರ್ಯಕ್ರಮವು ನಗರದ ಕೊಡಿಯಾಲ್‌ಬೈಲ್ ಸಭಾಂಗಣದಲ್ಲಿ ಜರುಗಿತು.
 ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅವ್ರು ಹಾಗೂ ಗಣ್ಯರು ಸೇರಿದಂತೆ ಹಲವು ಮಂದಿ ಸನ್ಮಾನಿಸಿದ್ರು. ತದ ಬಳಿಕ ಮಾತನಾಡಿದ ಸಚಿವ ರಮಾನಾಥ್ ರೈ, ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್ ಮಾದರಿ ಕೆಲಸ ಮಾಡುತ್ತಿದೆ. ಡಾ| ಎಂ.ಎನ್ ರಾಜೇಂದ್ರಕುಮಾರ್ ಅವ್ರು ಅಧ್ಯಕ್ಷರಾಗಲು ಎಲ್ಲಾ ಅರ್ಹತೆಯನ್ನು ಹೊಂದಿಕೊಂಡಿದ್ದಾರೆ ಎಂದು ಅವ್ರು ಹೇಳಿದರು.
 ಇನ್ನೂ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ನನ್ನ ಹಾಗೂ ರಾಜೇಂದ್ರ ಕುಮಾರ್ ನಡುವೆ ವೈಚಾರಿಕತೆಯಲ್ಲಿ ಭಿನ್ನಮತ ಇರಬಹದು. ಅದ್ರೆ ಅಭಿವೃದ್ಧಿ ವಿಚಾರಕ್ಕೆ ನಾವು ಹೊಂದಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
 ಇನ್ನು ಸನ್ಮಾನ ಸ್ವೀಕಾರಿಸಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರಕುಮಾರ್ ಮಾತನಾಡಿ, ನನ್ನನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
 ಈ ವೇಳೆ ಶಾಸಕ ಜೆ.ಆರ್.ಲೋಬೋ, ಮಾಜಿ ಸಚಿವ ಅಮರನಾಥ್ ಶೆಟ್ಟಿ , ರಾಜೇಂದ್ರಕುಮಾರ್ ಪತ್ನಿ ಅರುಣ್ ರಾಜೇಂದ್ರ , ಕ್ಯಾಂಪ್ಕೊ ಅಧ್ಯಕ್ಷ ಆರ್. ಶಶಿಚಂದ್ರ,
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿಯಮಿತ ಅಧ್ಯಕ್ಷ ರವಿರಾಜ್ ಹೆಗ್ಡೆ , ಆಡಳಿತ ಮಂಡಳಿ ನಿರ್ದೇಶಕರುಗಳಾದ ವಿನಯ್ ಕುಮಾರ್ ಸೂರಿಂಜೆ, ಬಿ.ನಿರಂಜನ್ , ಟಿ.ಜಿ.ರಾಜಾರಾಮ್ ಮತ್ತಿತರು ಉಪಸ್ಥತಿರಿದ್ರು. ಇದಕ್ಕೂ ಮೊದಲು ಮಂಗಳೂರು ವಿಮಾನ ನಿಲ್ದಾಣದಿಂದ ಕೊಡಿಯಾಲ್ ಬೈಲ್‌ನಲ್ಲಿರುವ ಎಸ್‌ಸಿಡಿಸಿಸಿ ಬ್ಯಾಂಕ್‌ವರೆಗೆ ಸಹಕಾರಿಗಳ ಅದ್ಧೂರಿಯ ವಾಹನ ಮೆರವಣಿಗೆ ಮೂಲಕ ಕರೆ ತರಲಾಯಿತು.

Related posts

Leave a Reply