Header Ads
Header Ads
Breaking News

ಎಸ್‌ ಸಿ-ಎಸ್‌ ಟಿಯ 176 ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಣೆ

ಮೂಡುಬಿದಿರೆ : ಅರಣ್ಯ ಇಲಾಖೆಯ ಮಂಗಳೂರು ವೃತ್ತ ಕುಂದಾಪುರ ವಿಭಾಗ, ಮೂಡುಬಿದಿರೆ ಉಪ ವಿಭಾಗ ಮೂಡುಬಿದಿರೆಯ ವಲಯ ಇದರ ವತಿಯಿಂದ ಸರಕಾರದ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಲ್ಲಿ 2017-18ನೇ ಸಾಲಿನ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡದ 176 ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲವನ್ನು ಸಮಾಜ ಮಂದಿರದಲ್ಲಿ ವಿತರಿಸಲಾಯಿತು.

ಶಾಸಕ ಕೆ. ಅಭಯಚಂದ್ರ ಅವರು ಅಧ್ಯಕ್ಷತೆಯನ್ನು ವಹಿಸಿ ಅಡುಗೆ ಅನಿಲವನ್ನು ವಿತರಿಸಿ ಮಾತನಾಡಿ ಅಡುಗೆ ಅನಿಲವು ಹಿಂದೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಸಿದ್ಧರಾಮಯ್ಯ ಸರಕಾರವು ಬಡವರಿಗೆ ಮತ್ತು ಎಸ್‌ಸಿ-ಎಸ್‌ಟಿ ಪಂಗಡದವರಿಗೆ ಉಚಿತವಾಗಿ ಅಡುಗೆ ಅನಿಲವನ್ನು ನೀಡುವ ಮೂಲಕ ಬಡವರ ಮನೆಯಲ್ಲೂ ಗ್ಯಾಸ್ ವ್ಯವಸ್ಥೆ ಇರಬೇಕೆಂದು ಸಮಾನ ಅವಕಾಶಗಳನ್ನು ಕಲ್ಪಿಸಿ ಬಡವರನ್ನು ಉದ್ಧಾರ ಮಾಡುತ್ತಿದೆ. ಇದಲ್ಲದೆ ಬಡವರು ಉಪವಾಸ ಇರಬಾರದೆಂದು ಸರಕಾರವು ಅನ್ನಭಾಗ್ಯದಂತಹ ಉತ್ತಮ ಯೋಜನೆಗಳನ್ನು ಕೂಡಾ ಜಾರಿಗೆ ತಂದಿದೆ ಎಂದು ಹೇಳಿದರು.

ಪುರಸಭಾ ಉಪಾಧ್ಯಕ್ಷ ವಿನೋದ್ ಸೆರಾವೋ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್, ಪುರಸಭಾ ಸದಸ್ಯರಾದ ಪಿ.ಕೆ.ಥೋಮಸ್, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ತಾ.ಪಂ ಸದಸ್ಯ ಪ್ರಕಾಶ್ ಗೌಡ ಅತಿಥಿಗಳಾಗಿ ಭಾಗವಹಿಸಿದ್ದರು.

Related posts

Leave a Reply