
ಗೆದ್ದ ಉನ್ಮಾದದಲ್ಲಿ ಎಸ್ಡಿಪಿಐ ರಾಷ್ಟ್ರವಿರೋಧಿ ವರ್ತನೆ ತೋರಿಸಿದೆ. ಅದೊಂದು ಭಯೋತ್ಪಾದನಾ ಸಂಸ್ಥೆಯಲ್ಲ ಎಂದು ತಿಳಿದುಕೊಂಡಿದ್ದೆವು. ಆದರೆ ಈಗ ಭಯೋತ್ಪಾದನೆಗೆ ಪೂರಕವಗಿ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಡಿಪಿಐ ನಡೆ ರಾಷ್ಟವಿರೋಧಿ ಕೃತ್ಯಕ್ಕೆ ಪೂರಕವಾಗಿದೆ. ಅವರು ಭಾರತ್ ಮಾತಕೀ ಜೈ ಘೋಷಣೆ ಕೂಗಬೇಕಿತ್ತು. ಆದರೆ ನಮ್ಮ ಶತ್ರುರಾಷ್ಟ್ರದ ಪರ ಘೋಷಣೆ ಕೂಗಿದ್ದಾರೆ. ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು. ಕಾಂಗ್ರೆಸ್ ನವರ ದ್ವಂದ್ವ ನಿರ್ಧಾರದಿಂದ ಜನ ಕೈ ಬಿಡುತ್ತಿದ್ದಾರೆ. ಅಲ್ಪಸಂಖ್ಯಾತರೇ ಕಾಂಗ್ರೆಸ್ ಕೈ ಬಿಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.