Header Ads
Breaking News

ಎಸ್‍ಬಿಐನಿಂದ ಗೃಹ ಮತ್ತು ವಾಹನ ಸಾಲದ ಉತ್ಸವ : ಜ.24ರಂದು ಬೆಂದೂರ್‍ವೆಲ್ ನಲ್ಲಿರುವ ಹಾಲ್‍ನಲ್ಲಿ ಆಯೋಜನೆ

ಎಸ್.ಬಿ.ಐ. ಮಂಗಳೂರು ಕ್ಷೇತ್ರವು ಜನವರಿ 24ರಂದು ಮಂಗಳೂರಿನ ಬೆಂದೂರ್‍ವೆಲ್ ನಲ್ಲಿರುವ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜೂಬಿಲೀ ಹಾಲ್‍ನಲ್ಲಿ ಗೃಹ ಹಾಗೂ ವಾಹನ ಸಾಲಗಳ ಉತ್ಸವವನ್ನು ಆಯೋಜಿಸುತ್ತಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ವಿಶ್ವದ ಫಾರ್ಚೂನ್ – 500 ರ ಪಟ್ಟಿಯಲ್ಲಿರುವ ಭಾರತದ ಏಕ ಮಾತ್ರ ಬ್ಯಾಂಕ್. ದೇಶದ ಗೃಹ ಸಾಲಗಳ ಒಟ್ಟು ಮಾರುಕಟ್ಟೆ ಪಾಲಿನಲ್ಲಿ ಶೇಕಡಾ 31% ಪಾಲು ಹೊಂದಿದ್ದು ಮನೆ ಸಾಲಕ್ಕೆ ಗ್ರಾಹಕರ ನೆಚ್ಚಿನ ಬ್ಯಾಂಕ್ ಆಗಿದೆ.ಕೋವಿಡ್ ನಂತರ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ಗೃಹ ಸಾಲಗಳಿಗೆ ಸಂಸ್ಕಾರಣಾ ಶುಲ್ಕದಲ್ಲಿ ಶೇಕಡಾ 100% ರಿಯಾಯತಿಯನ್ನು ನೀಡುತ್ತಿದೆ. ತ್ವರಿತ ಗತಿಯಲ್ಲಿ ಸಾಲ ವಿತರಣೆ, ಶೂನ್ಯ ಸಂಸ್ಕಾರಣಾ ಶುಲ್ಕ, ಆಕರ್ಷಕ ಬಡ್ಡಿ ದರ ಇವುಗಳು ಗೃಹ ಸಾಲದ ವೈಶಿಷ್ಟಗಳು. ಎಸ್.ಬಿ.ಐ. ಗೃಹ ಸಾಲವನ್ನು ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ದರವಾದ 6.80% ರಲ್ಲಿ ನೀಡುತ್ತಿದೆ ಮತ್ತು ಕಾರುಗಳ ಸಾಲಗಳನ್ನು ಕನಿಷ್ಠ 7.50% ದರದಲ್ಲಿ (ಫಿಕ್ಸೆಡ್ ದರ) ಸಾಲದ ಪೂರ್ಣ ಅವಧಿಯ ವರೆಗೆ ನೀಡುತ್ತಿದೆ.

ಈ ಗೃಹ ಹಾಗೂ ವಾಹನ ಸಾಲದ ಉತ್ಸವದಲ್ಲಿ ಎಸ್.ಬಿ.ಐ. ಗೃಹ ಹಾಗೂ ವಾಹನ ಸಾಲಕ್ಕೆ ತಾತ್ಕಾಲಿಕವಾಗಿ ಮಂಜೂರಾತಿಯನ್ನೂ ಸಹ ನೀಡಲಾಗುತ್ತಿದೆ. ಯೋನೋ ಡಿಜಿಟಲ್ ಆಪ್ ಮುಖಾಂತರ ಹೊಸ ವಾಹನ ಸಾಲಗಳಿಗೆ ಅರ್ಜಿ ಸಲ್ಲಿಸುವ ಎಲ್ಲ ಗ್ರಾಹಕರಿಗೆ ಸಂಸ್ಕಾರಣಾ ಶುಲ್ಕದಲ್ಲಿ ಶೇಕಡಾ 100% ರಿಯಾಯತಿಯನ್ನು ಕೂಡ ನೀಡುತ್ತಿದೆ.ಉತ್ಸವವನ್ನು ಆಯೋಜಿಸುವುದರ ಮೂಲಕ ಎಸ್.ಬಿ.ಐ. ಹೆಸರಾಂತ ಬಿಲ್ಡರ್ ಗಳು ಮತ್ತು ಕಾರ್ ಡೀಲರ್ ಗಳನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಸಾರ್ವಜನಿಕರಿಗೆ ಮನೆ ಹಾಗೂ ಕಾರು ಖರೀದಿಯ ಕನಸನ್ನು ನನಸಾಗಿಸುತ್ತಿದೆ. ಎಸ್.ಬಿ.ಐ.ನ ಗೃಹ ಹಾಗೂ ವಾಹನ ಸಾಲದ ಸಂದರ್ಭದಲ್ಲಿ ಬಿಲ್ಡರ್‍ಗಳು ಮತ್ತು ಕಾರ್ ಡೀಲರ್‍ಗಳು ಗ್ರಾಹಕರಿಗೆ ಆಕರ್ಷಕ ಡಿಸ್ಕೌಂಟ್ ನೀಡಲಿದ್ದಾರೆ. ಸಾರ್ವಜನಿಕರು ಗೃಹ ಹಾಗೂ ವಾಹನ ಸಾಲದ ಉತ್ಸವಕ್ಕೆ ಭೇಟಿ ನೀಡಿ ಈ ಅವಕಾಶವನ್ನು ಸದುಪಯೋಗಿಸಿಕೊಂಡು ಹೊಸ ವರ್ಷವನ್ನು ಸಂತಸದಿಂದ ಆಚರಿಸಲು ಎಸ್.ಬಿ.ಐ. ಈ ಮೂಲಕ ಕೋರುತ್ತದೆ.

Related posts

Leave a Reply

Your email address will not be published. Required fields are marked *