Header Ads
Header Ads
Breaking News

ಎಸ್.ಎಸ್.ಪಿ.ಎ.ಎಲ್.ಪಿ.ಎಸ್ ಶಾಲೆಯಲ್ಲಿ ಚಿಣ್ಣರ ಕಲರವ ಕಾರ್ಯಕ್ರಮ

ಕಾಸರಗೋಡು : ಗಡಿನಾಡಿನ ಕನ್ನಡದ ಚಿಣ್ಣರ ಕಲರವ ಕಾರ್ಯಕ್ರಮವು ಬದಿಯಡ್ಕ ಎಸ್.ಎಸ್.ಪಿ.ಎ.ಎಲ್.ಪಿ.ಎಸ್ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ಚಿಣ್ಣರೇ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು.ಕಾರ್ಯಕ್ರಮವನ್ನು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪಂಚಮುಖಿ ಶಿಕ್ಷಣವನ್ನು ಪಡೆಯುತ್ತಿರುವ ಬಾಲಪ್ರತಿಭೆ ಚೇತನ್ ಯಾದವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಚೇತನ್ ಉನ್ನತವಾದ ಧ್ಯೇಯವನ್ನಿಟ್ಟುಕೊಂಡು ಮಕ್ಕಳ ಸರ್ವತೋಮುಖ ಬಳವಣಿಗೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಆಯೋಜಿಸಿ ಅವಕಾಶ ಹಾಗೂ ಅಂಗೀಕಾರ ನಮ್ಮಂತ ಮಕ್ಕಳ ಪುಟ್ಟ ಪುಟ್ಟ ಪ್ರಯತ್ನಗಳನ್ನು ದೊಡ್ಡ ಸಾಧನೆಯೆಡೆಗೆ ಕರೆದೊಯ್ಯುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಕನ್ನಡ ಅಧ್ಯಾಪಕ ಸಂಘಟಣೆಯ ಅಧ್ಯಕ್ಷರಾದ ಶ್ರೀಧರ ನಾಯ್ಕ್ ಶ್ರೇಣಿ , ಕರ್ನಾಟಕ ಜನಪದ ಪರಿಷತ್ತ್ ಪ್ರಶಸ್ತಿ ಪುರಸ್ಕೃತರಾದ ಜಯರಾಮ ಪಾಟಾಳಿ ಪಡುಮಲೆ, ಕವಿಗಳಾದ ಸುಭಾಷ್ ಪೆರ್ಲ, ರವಿಕಾಂತ ಕೇಸರಿ ಕಡಾರು, ಶಾಲಾ ಮುಖ್ಯೋಪಾಧ್ಯಾಯಿನಿಯಾದ ಅಂಬಿಕಾ ಸರಸ್ವತಿ , ಪಿ.ಟಿ.ಎ. ಅಧ್ಯಕ್ಷ ಕುಸುಮಾ ಮುಂತಾದವರು ಶುಭಾಸಂಶನೆಗೈದರು. ಕೇರಳ ವಿಧಾನ ಸಭೆಯಲ್ಲಿ ಕನ್ನಡದಲ್ಲಿಯೇ ಪ್ರತಿಜ್ಞೆ ಯನ್ನು ಮಾಡಿದಂತಹ ಅಲ್ಲದೇ ಕಾಸರಗೋಡಿನ ಕನ್ನಡಿಗರಿಗೆ ಪ್ರೋತ್ಸಾಹ ಮತ್ತು ಬೆಂಬಲವಾಗಿದ್ದು ನಮ್ಮನ್ನಗಲಿದ ಮಂಜೇಶ್ವರ ಶಾಸಕ ಅಬ್ದುಲ್ ರಝಾಕ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಆತ್ಮ ಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

Related posts

Leave a Reply