Header Ads
Breaking News

ಎಸ್.ಡಿ.ಎಂ ಬಿ.ವೋಕ್ ವಿಭಾಗಕ್ಕೆರಾಷ್ಟ್ರೀಯ ಪ್ರಶಸ್ತಿಯ ಗರಿ

ಉಜಿರೆ :ಎಸ್.ಡಿ.ಎಂ ಪದವಿ ಕಾಲೇಜಿನ ಬಿ.ವೋಕ್ ವಿಭಾಗದ ಶಿಲ್ಜೊ ವರ್ಗೀಸ್‍ಅವರ ಸಂಕಲನದ ‘ಸವಿ’ ಎಂಬ ಕಿರುಚಿತ್ರಕ್ಕೆರಾಷ್ಟ್ರಮಟ್ಟದಉತ್ತಮಎಡಿಟಿಂಗ್‍ಪ್ರಶಸ್ತಿಲಭಿಸಿದೆ.ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ, ರಾಷ್ಟ್ರಮಟ್ಟದಕಿರುಚಿತ್ರಸ್ಪರ್ಧೆಯಲ್ಲಿ ವಿಜೇತರಿಗೆಇತ್ತೀಚೆಗೆ ಬಹುಮಾನ ವಿತರಣಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸ್ಪರ್ಧೆಯಲ್ಲಿ ವಿವಿಧಕಾಲೇಜಿನ 32 ತಂಡಗಳು ಭಾಗವಹಿಸಿದ್ದು, ಅದರಲ್ಲಿ 10 ಕಿರುಚಿತ್ರಗಳು ಕೊನೆಯ ಸುತ್ತಿಗೆಆಯ್ಕೆಯಾಗಿದ್ದವು.ಇದರಲ್ಲಿಉತ್ತಮಕಿರುಚಿತ್ರ, ಎಡಿಟಿಂಗ್, ಛಾಯಾಗ್ರಹಣ ಒಳಗೊಂಡಂತೆ ವಿವಿಧ ಅಂಶಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ಕಳೆದ ವರ್ಷ ಆರಂಭಿಸಿದ್ದಬಿ.ವೋಕ್ (ಬ್ಯಾಚುಲರ್‍ಆಪ್ ವೊಕೇಶನಲ್) ಕೋರ್ಸ್ ನಡಿಜಿಟಲ್ ಮೀಡಿಯಾ ಮತ್ತು ಫಿಲಂ ಮೇಕಿಂಗ್ ವಿಭಾಗದ 13 ವಿದ್ಯಾರ್ಥಿಗಳು ಸೇರಿಕೊಂಡು ಲಾಕ್‍ಡೌನ್ ಸಂದರ್ಭದಲ್ಲಿ ಚಿತ್ರೀಕರಿಸಿದ ‘ಸವಿ’ ಎಂಬ ಕಿರುಚಿತ್ರಇದಾಗಿದ್ದು, ಈ ಕಿರುಚಿತ್ರವನ್ನು ವಿಭಾಗದ ವಿದ್ಯಾರ್ಥಿಆ್ಯಂಟೋನಿ ಅವರು ನಿರ್ದೇಶಿಸಿದ್ದಾರೆ.

ಸವಿ ಕಿರುಚಿತ್ರವುಕೋವಿಡ್ ಸಕಾರತ್ಮಕತೆ ವಿಷಯದಕುರಿತಾಗಿದೆ.ಈ ಚಿತ್ರವನ್ನು ಕಾರ್ಕಳದ ಪುರಾತನ ಮನೆಯೊಂದರಲ್ಲಿ ಹಾಗೂ ಮತ್ತಿತರ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.ಭಾರತದವನ್ನು ಕೆಲಸ ನಿಮಿತ್ತ ವಿದೇಶಕ್ಕೆ ತೆರಳಿದ್ದು, ತನ್ನೂರಿನ ಬಾಂಧವ್ಯವನ್ನು ಕಳೆದುಕೊಂಡಿರುತ್ತಾನೆ. ಕೊರೊನತೀವ್ರತೆಯಿಂದಾಗಿ ಸ್ವದೇಶಕ್ಕೆ ಮರಳಿ ಬಂದಾಗ ಅವನಿಗೆ ತಂದೆ – ತಾಯಿ ಹಾಗೂ ಊರಿನಜನರ ಪ್ರೀತಿ, ವಿಶ್ವಾಸ ಸಿಗುವುದರೊಂದಿಗೆ ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಅವನು ತನ್ನಜೀವನದಲ್ಲಿ ಕಳೆದುಕೊಂಡಿದ್ದ ಹಳ್ಳಿ ಸೊಗಡನ್ನುಕೊರೊನವು ಮತ್ತೆ ಪಡೆದುಕೊಳ್ಳುವಂತೆ ಮಾಡುತ್ತದೆ. ಹೀಗೆ ಕೊರೊನವು ಕೆಲವರಜೀವನದಲ್ಲಿ ಧನಾತ್ಮಕವುಳ್ಳ ಅಂಶಗಳನ್ನು ತಂದುಕೊಟ್ಟಿದೆಎಂದು ಈ ಕಿರುಚಿತ್ರದ ಮೂಲಕ ತಿಳಿಸಲಾಗಿದೆ.
ವರದಿ : ಸುಮುಖ ಹೆಗಡೆ

Related posts

Leave a Reply

Your email address will not be published. Required fields are marked *