Header Ads
Header Ads
Breaking News

ಎಸ್.ಡಿ.ಎಂ ಕಾಲೇಜಿನಲ್ಲಿ ’ಪರಾಮರ್ಶ್’ ತರಬೇತಿ ಕಾರ್ಯಾಗಾರ

ಯು.ಜಿ.ಸಿ.ಯ ಪರಾಮರ್ಶ್ ಯೋಜನೆಯಡಿ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ನವೆಂಬರ್ 8ರಂದು ಶುಕ್ರವಾರ ನ್ಯಾಕ್ ಮೌಲ್ಯಮಾಪನ ಕುರಿತಂತೆ ಆಸುಪಾಸಿನ ಕಾಲೇಜುಗಳಿಗೆ ಮಾರ್ಗದರ್ಶನ ಕಾರ್ಯಾಗಾರ ನಡೆಯಲಿದೆ.

ಸತತ ಮೂರು ಸಾರಿ ನ್ಯಾಕ್‌ನಿಂದ ’ಎ’ಗ್ರೇಡ್ ಮನ್ನಣೆಗೆ ಪಾತ್ರವಾಗಿರುವ ಉಜಿರೆ ಎಸ್.ಡಿ.ಎಂ ಕಾಲೇಜು ಈಗ ಮೆಂಟರ್ ಸ್ಥಾನಮಾನ ಗಳಿಸಿದ್ದು, ಇದರಡಿಯಲ್ಲಿ ಈ ಕಾರ್ಯಕ್ರಮ ಏರ್ಪಾಡಾಗಿದೆ. ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲು ಅಗತ್ಯವಿರುವ ಕಾಲೇಜುಗಳಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ಕೊಡುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿತವಾಗಿದೆ.

ನ್ಯಾಕ್ ಸಂಸ್ಥೆಯ ಬೆಂಗಳೂರು ಡೆಪ್ಯುಟಿ ಅಡ್ವೈಸರ್ ಗಣೇಶ್ ಹೆಗಡೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದು, ಎಸ್.ಡಿ.ಎಂ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಉದ್ಘಾಟಿಸುವರು. ಪ್ರಾಂಶುಪಾಲ ಪ್ರೊ.ಎಸ್.ಸತೀಶ್ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Related posts

Leave a Reply

Your email address will not be published. Required fields are marked *