Header Ads
Header Ads
Breaking News

ಎಸ್.ಡಿ.ಎಂ ಕಾಲೇಜಿನಲ್ಲಿ ಮಾಧ್ಯಮಗಳ ಪ್ರಸ್ತುತ ಸ್ಥಿತಿಗತಿಯ ಕುರಿತು ಸಂವಾದ ಕಾರ್ಯಕ್ರಮ

ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಂಗಳವಾರ ಮಾಧ್ಯಮಗಳು ಮಾರಾಟವಾಗುತ್ತಿದೆ ಅಥವಾ ಮಾರಾಟವಾಗುತ್ತಿಲ್ಲ ಎಂಬ ವಿಷಯದ ಕುರಿತು ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸಮಾಜದ ಜೊತೆ ಬೆರೆಯಲು ಮಾಧ್ಯಮವು ಬೇಕೆ ಬೇಕು. ಆದರೆ ಇತ್ತಿಚೇಗೆ ಮಾಧ್ಯಮದ ಕುರಿತು ಅಪವಾದಗಳು ಕೇಳಿ ಬರುತ್ತಿದೆ ಮಾಧ್ಯಮಗಳು ತಮ್ಮನ್ನು ತಾವು ಮಾರಾಟಕ್ಕಿಟ್ಟುಕೊಳ್ಳುತ್ತಿವೆ ಇದು ದೇಶದ ಬೆಳವಣಿಗೆಗೆ ಮಾರಕವಾಗುತ್ತಿದೆ ಎಂದು ವಿದ್ಯಾರ್ಥಿ ಕಿರಣ್ ಹೇಳಿದರು.

ಮಾಧ್ಯಮವು ಒಂದು ಸಿದ್ಧಾಂತವನ್ನು ಇಟ್ಟುಕೊಂಡು ಮಾಹಿತಿ ನೀಡುತ್ತದೆ ಎಂದ ಮಾತ್ರಕ್ಕೆ ಆ ಇಡಿ ಮಾಧ್ಯಮ ಸಂಸ್ಥೆಯೆ ಮಾರಾಟವಾಗುತ್ತಿದೆ ಎನ್ನುವುದು ಎಷ್ಟರ ಮಟ್ಟಿಗೆ ಸೂಕ್ತ ಎಂದು ಮಾಧ್ಯಮದ ಪರವಾಗಿ ವಿದ್ಯಾರ್ಥಿ ಪ್ರಜ್ವಲ್ ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಪ್ರಥಮ್ ಸಿದ್ಧಾಂತಕ್ಕೆ ಬದಲಾಗಿ ಯಾವುದೋ ಒಂದು ಪ್ರತಿಷ್ಠಿತ ರಾಜಕೀಯ ಪಕ್ಷದ ಪ್ರತಿಸಿಧಿಗಳೇ ಮಾಧ್ಯಮದ ಮಾಲಿಕರಾಗಿ ತಮಗೆ ಹೆಚ್ಚು ಜನಪ್ರಿಯತೆ ಸಿಗುವಂತೆ ಮತ್ತು ತಮ್ಮ ವಿರೋಧಿ ಪಕ್ಷಕ್ಕೆ ಕೆಡುಕಾಗುವಂತಹ ಸುದ್ದಿಗಳನ್ನು ಪ್ರಸಾರ ಮಾಡಿತ್ತಿರುವುದನ್ನು ಗಮನಿಸಬೇಕಾಗಿದೆ ಎಂದರು.
ಪ್ರಥಮ್ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿದ ಸಂಧ್ಯಾ ಮಾಧ್ಯಮಗಳು ಬಹುಷಃ ಇಲ್ಲದೇ ಇದ್ದರೆ ಯಾವ ತುರ್ತು ಮಾಹಿತಿಗಳು ಜನರನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ ಹಿಗಾಗಿ ಮಾರಾಟವಾಗುತ್ತಿರುವುದು ಮಾಧ್ಯಮವಲ್ಲ ನಾವು ನೊಡುತ್ತಿರುವ ದೃಷ್ಟಿಕೊನದಲ್ಲಿ ಎಂದು ಸ್ಪಷ್ಟನೆ ನೀಡಿದರು.

ಈ ವಿಷಯಕ್ಕೆ ಸಂಬಂದಿಸಿದಂತೆ ನಿರೂಪಕರಾದ ವಿದ್ಯಾರ್ಥಿ ಶಿವಪ್ರಸಾದ್ ಒಂದು ಹೊಸ ಚರ್ಚಾ ಮಾರ್ಗವನ್ನು ಕಾಲಕಾಲಕ್ಕೆ ನೀಡುತಿದ್ದು ಚರ್ಚೆಗೆ ಮತ್ತಷ್ಟು ಹುಮ್ಮಸ್ಸನ್ನು ತರುತಿತ್ತು.ಚರ್ಚೆಯ ಅಂತಿಮದಲ್ಲಿ ಓದುಗರು ಕೂಡ ಪ್ರಬುದ್ಧರಾಗಬೇಕು ಮತ್ತು ಓದಿದ ವಿಷಯದ ಕುರಿತು ವಿಮರ್ಶೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಆಗ ಮಾತ್ರ ಮಾಧ್ಯಮಗಳು ಮಾರಾಟವಾಗದೆ ಇರುವಂತೆ ನೋಡಿಕೊಳ್ಳಲು ಸಾಧ್ಯ ಎಂಬುದು ಸ್ಪಷ್ಟವಾಯಿತು.ಈ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಹೊನಕೆರಪ್ಪ ಸಂಶಿ, ಸುಷ್ಮಾ, ಸ್ವಾತಿ, ಪ್ರಶಾಂತ್ ಮತ್ತು ಉಪನ್ಯಾಸಕಿ ಶೃತಿ ಜೈನ್ ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *