Header Ads
Header Ads
Breaking News

ಎಸ್.ಡಿ.ಎಂ ಕಾಲೇಜಿನಲ್ಲಿ” ರಾಸಾಯನಿಕ ವಿಜ್ಞಾನ ವಲಯದಲ್ಲಿ ಇತ್ತೀಚೆಗಿನ ಬೆಳವಣಿಗೆಗಳು” ಕುರಿತು ಕಾರ್ಯಗಾರ

ಉಜಿರೆ :  ಎಸ್.ಡಿ.ಎಂ ಕಾಲೇಜಿನ ರಸಾಯನಶಾಸ್ತ್ರ ವಿಭಾಗವು ’ರಾಸಾಯನಿಕ ವಿಜ್ಞಾನ ವಲಯದಲ್ಲಿ ಇತ್ತೀಚೆಗಿನ ಬೆಳವಣಿಗೆಗಳು’ ಎಂಬ ವಿಷಯದ ಕುರಿತು ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನಾ ಮಂಡಳಿಯ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ರಾಷ್ಟ್ರೀಯ ಸೆಮಿನಾರನ್ನು ಆಯೋಜಿಸಲಾಯಿತು.

ಕರ್ನಾಟಕ ಹೈಬ್ರಿಡ್ ಮೈಕ್ರೊಡಿವೈಸಸ್ ಲಿಮಿಟೆಡ್ ಅಧ್ಯಕ್ಷ ಡಾ. ಇ. ಎಸ್ ದ್ವಾರಕ ದಾಸ್ ಭಾರತದ ರಾಸಾಯನಿಕ ಶೈಕ್ಷಣಿಕ ವಲಯದಲ್ಲಿ ನಡೆಯುವ ಸಂಶೋಧನೆಗಳಿಗೆ ವಿದೇಶಗಳಲ್ಲಿ ವ್ಯಾಪಕ ಬೇಡಿಕೆ ಇದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮಾತನಾಡಿ ಶೈಕ್ಷಣಿಕ ವಲಯದಲ್ಲಿನ ವಿವಿಧ ಜ್ಞಾನ ಶಿಸ್ತುಗಳ ನಡುವಿನ ಅನುಸಂಧಾನ ಸಾಧ್ಯವಾಗುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ಟಿ ಎನ್ ಕೇಶವ್, ಎಸ್.ಡಿ.ಎಮ್ ಪದವಿ ಮತ್ತು ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪಿ ವಿಶ್ವನಾಥ್, ರಸಾಯನ ಶಾಸ್ತ್ರದ ಅಧ್ಯಾಪಕಿ ಪ್ರೊ.ನಂದಕುಮಾರಿ ಉಪಸ್ಥಿತರಿದ್ದರು.

Related posts

Leave a Reply