Header Ads
Header Ads
Breaking News

ಎಸ್.ಡಿ.ಎಂ ’ಝೇಂಕಾರ’ಕ್ಕೆ ಅದ್ಧೂರಿ ಚಾಲನೆ

ಝೇಂಕಾರ-2019 ರಾಷ್ಟ್ರಮಟ್ಟದ ಅಂತರ್ ಕಾಲೇಜು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭ ಉಜಿರೆಯ ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅದ್ಧೂರಿಯಾಗಿ ನಡೆಯಿತು. ಸುಮಾರು 30ಕ್ಕೂ ಅಧಿಕ ಕಾಲೇಜುಗಳ ಪ್ರತಿಭಾನ್ವಿತರ ತಂಡಗಳು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು.ರಾಷ್ಟ್ರಮಟ್ಟದ ಅಂತರ್ ಕಾಲೇಜು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವ ಝೇಂಕಾರದ ಉದ್ಘಾಟನೆಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಯೋಜನಾ ನಿರ್ದೇಶಕರಾದ ಡಿ. ಶ್ರೇಯಸ್ ಕುಮಾರ್ ನೆರವೇರಿಸಿದರು.

ಶೈಕ್ಷಣಿಕ ಜೀವನ ಪೂರ್ಣಗೊಂಡನಂತರ ಪಠ್ಯದ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳ ಕುರಿತ ನೆನಪುಗಳೂ ಮನಃಪಟಲದಲ್ಲಿ ಉಳಿದುಬಿಡುತ್ತವೆ. ಪಠ್ಯೇತರ ಚಟುವಟಿಕೆಗಳು ಜೀವನ ಶಿಕ್ಷಣ ಕಲಿಸಿಕೊಡುತ್ತವೆ.ಆ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುತ್ತವೆ. ಅರ್ಥಪೂರ್ಣ ಸಾಧನೆ ನಿರೂಪಿತವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಕಲಿಕೆಯು ಜ್ಞಾನ ಮತ್ತು ಕೌಶಲ್ಯವನ್ನು ಮಾತ್ರವಲ್ಲದೇ ಭಿನ್ನ ಗ್ರಹಿಕೆಯನ್ನು ರೂಪಿಸಿಕೊಳ್ಳುವುದಕ್ಕೂ ನೆರವಾಗುವಂಥ ಶೈಕ್ಷಣಿಕ ಪರಿಕಲ್ಪನೆ ಎಂದು ವ್ಯಖ್ಯಾನಿಸಿದರು.
ತುಳುನಾಡ ಶೈಲಿಯ ಚಂಡೆ ವಾದನ ಹಾಗೂ ಸಿರಿಯೊಡೆದು ಅದಕ್ಕೆ ನೀರೆರೆಯವುದರದೊಂದಿಗೆ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. 30ಕ್ಕೂ ಅಧಿಕ ಕಾಲೇಜುಗಳ ಪ್ರತಿಭಾನ್ವಿತರ ತಂಡಗಳು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು.
ಇತ್ತೀಚೆಗೆ ಶಿವೈಕ್ಯರಾದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿ ಅವರನ್ನುಕಾರ್ಯಕ್ರಮದ ಆರಂಭದಲ್ಲಿ ಸ್ಮರಿಸಿ ಮೌನಾಚರಿಸಲಾಯಿತು.

ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ.ಎನ್.ಕೇಶವ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಬಿ. ಗಣಪಯ್ಯ, ’ಝೇಂಕಾರ-2019’ರ ಸಂಯೋಜಕ, ಸಹಾಯಕ ಪ್ರಾಧ್ಯಾಪಕರ ಸುವೀರ್ ಜೈನ್, ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅನನ್ಯ ಸೋನಿಯಾ ವರ್ಮ ಉಪಸ್ಥಿತಿತರಿದ್ದರು.

Related posts

Leave a Reply