Header Ads
Header Ads
Breaking News

ಎಸ್.ಡಿ.ಎಂ ’ಝೇಂಕಾರ’ಕ್ಕೆ ತಾರಾ ಮೆರಗು : ಜ.23,24 ರಂದು ಶೈಕ್ಷಣಿಕ, ಸಾಂಸ್ಕೃತಿಕ ಉತ್ಸವ

ಉಜಿರೆ : ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರವು ಇದೇ ತಿಂಗಳ 23 ಮತ್ತು 24ರಂದು ಆಯೋಜಿಸಿರುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವ ’ಝೇಂಕಾರ’ದಲ್ಲಿ ಖ್ಯಾತ ಸಿನಿಮಾ ನಿರ್ದೇಶಕರಾದ ರಿಷಬ್ ಶೆಟ್ಟಿ, ’ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್.ಬಿ ಶೆಟ್ಟಿ, ನಟ ಪ್ರಮೋದ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. 

ಉತ್ಸವದ ಭಾಗವಾಗಿ ಆಯೋಜಿತವಾಗಲಿರುವ ’ಸ್ಟಾರ್ ನೈಟ್’ ಕಾರ್ಯಕ್ರಮವನ್ನು ಅವರು ನಡೆಸಿಕೊಡಲಿದ್ದಾರೆ. ಈ ಮೂಲಕ ’ಝೇಂಕಾರ’ಕ್ಕೆ ತಾರಾಮೆರಗು ಲಭಿಸಲಿದೆ. ಅವರೊಂದಿಗೆ ವಿದ್ಯಾರ್ಥಿಗಳು ಹಾಗೂ ಪ್ರೇಕ್ಷಕರು ಸಂವಾದಿಸುತ್ತಾರೆ.
’ಝೇಂಕಾರ’ ಉತ್ಸವವನ್ನು ಜನವರಿ 23ರಂದು ಶ್ರೇಯಸ್ ಹೆಗ್ಗಡೆಯವರು ಉದ್ಘಾಟಿಸಲಿದ್ದು, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ಎನ್.ಕೇಶವ್, ಸ್ನಾತಕೋತ್ತರ ಕೇಂದ್ರದ ಡೀನ್ ಗಣಪಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
’ಝೇಂಕಾರ’ವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವವಾಗಿದ್ದು, ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳೊಳಗೆ ಸ್ಪರ್ಧಾತ್ಮಕ ಮನೋಭಾವ ನೆಲೆಗೊಳಿಸುತ್ತದೆ. ಪ್ರಸಕ್ತ ವರ್ಷ ರೆಟ್ರೋ ಥೀಮ್‌ನೊಂದಿಗೆ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮ ವಿನ್ಯಾಸವು ರೆಟ್ರೊ ಸ್ಟೈಲ್‌ನೊಂದಿಗೆ ಕಂಗೊಳಿಸಲಿದೆ.
ಉತ್ಸವದ ಪ್ರಯುಕ್ತ ಎಂಟು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅದರಲ್ಲಿ ’ಮಿಸ್ಟರ್ ಆಂಡ್ ಮಿಸ್ ಝೇಂಕಾರ’ ಹಾಗೂ ’ಗಲ್ಲಿ ಕ್ರಿಕೆಟ್’ ಎಂಬ ಎರಡು ಸ್ಪರ್ಧೆಗಳು ಹೊಸದಾಗಿ ಸೇರಿಕೊಂಡಿವೆ. ’ಸೈನ್ಸ್ ಕಾರ್ನಿವಲ್’, ’ಮ್ಯಾನೇಜ್‌ಮೆಂಟ್ ಮಾಯ್ಸ್ಟ್ರೋ’, ’ಆರ್‍ಟ್ ಅಟ್ಯಾಕ್’, ’ರೆಟ್ರೋ ರಿಮಿಕ್ಸ್ – ಜಸ್ಟ್ ಡಾನ್ಸ್’, ’ಮೂವಿ ಸ್ಪೂಫ್’, ’ಯುಥ್ ಆನ್ ರ್‍ಯಾಂಪ್’ ಸ್ಪರ್ಧೆಗಳು ಜರುಗಲಿವೆ. ನಾನಾ ಕಡೆಗಳಿಂದ ಒಟ್ಟು ೩೫ ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದು ಉತ್ಸವದ ಸಂಯೋಜಕ, ಸಹಾಯಕ ಪ್ರಾಧ್ಯಾಪಕ ಸುವೀರ್ ಜೈನ್ ತಿಳಿಸಿದ್ದಾರೆ.
’ಝೇಂಕಾರ’ದ ಮೊದಲ ವರ್ಷ ಭಟ್ಕಳದ ಅಂಜುಮಾನ್ ಕಾಲೇಜು ಚಾಂಪಿಯನ್‌ಶಿಪ್ ಪಡೆದುಕೊಂಡರೆ, ಎರಡನೇ ವರ್ಷದಲ್ಲಿ ಮಂಗಳೂರಿನ ಎಸ್.ಡಿ.ಎಂ ಕಾಲೇಜು ಚಾಂಪಿಯನ್‌ಶಿಪ್ ಮನ್ನಣೆ ತನ್ನದಾಗಿಸಿಕೊಂಡಿತ್ತು.

Related posts

Leave a Reply