Header Ads
Breaking News

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಿಗೆ ರ್‍ಯಾಂಕ್‌ಗಳ ಸರಮಾಲೆ

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳಿಗೆ ನಡೆಸಿದ ಅಂತಿಮ ವರ್ಷದ ಪರೀಕ್ಷೆಗಳಲ್ಲಿ ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೊಳಪಟ್ಟ ವಿವಿಧ ಕಾಲೇಜುಗಳು ಅತ್ಯಧಿಕ ರ್‍ಯಾಂಕ್‌ಗಳನ್ನು ಬಾಚಿಕೊಳ್ಳುವ ಮೂಲಕ ಸಾಧನೆ ಮೆರೆದಿವೆ.

2019-20ರ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಸಮಗ್ರ ಹಾಗೂ ವಿಷಯವಾರು ಒಟ್ಟು 920 ರ್‍ಯಾಂಕ್‌ಗಳನ್ನು ಗಳಿಸುವ ಮೂಲಕ ವಿಶ್ವವಿದ್ಯಾಲಯ ನೀಡುವ ರ್‍ಯಾಂಕ್‌ಗಳಲ್ಲಿ ಸುಮಾರು1/3ಭಾಗ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಪಾಲಾಗಿವೆ.

ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ಉಜಿರೆಯ ಎಸ್.ಡಿ.ಎಂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜಿಗೆ 20ಸಮಗ್ರ ರ್‍ಯಾಂಕುಗಳು ಸೇರಿದಂತೆ ಒಟ್ಟು 346 ರ್‍ಯಾಂಕುಗಳು, ಹಾಸನದ ಎಸ್.ಡಿ.ಎಂ ಆಯುರ್ವೇದ ಕಾಲೇಜಿಗೆ 55 ಸಮಗ್ರ ರ್‍ಯಾಂಕುಗಳು ಸೇರಿದಂತೆ ಒಟ್ಟು 197 ರ್‍ಯಾಂಕುಗಳು, ಉಡುಪಿಯ ಎಸ್.ಡಿ.ಎಂ ಆಯುರ್ವೇದ ಕಾಲೇಜಿಗೆ 22 ಸಮಗ್ರ ರ್‍ಯಾಂಕುಗಳು ಸೇರಿದಂತೆ ಒಟ್ಟು 138ರ್‍ಯಾಂಕುಗಳು, ಧಾರವಾಡದ ಎಸ್.ಡಿ.ಎಂ ದಂತ ವಿಜ್ಞಾನ ಕಾಲೇಜಿಗೆ 10 ಚಿನ್ನದ ಪದಕಗಳು, 31 ಸಮಗ್ರ ರ್‍ಯಾಂಕುಗಳು ಸೇರಿದಂತೆ ಒಟ್ಟು 171 ರ್‍ಯಾಂಕುಗಳು, ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜಿಗೆ9ಸಮಗ್ರ ರ್‍ಯಾಂಕುಗಳು ಸೇರಿದಂತೆ ಒಟ್ಟು 20 ರ್‍ಯಾಂಕುಗಳು, ಎಸ್.ಡಿ.ಎಂ ಫಿಸಿಯೋಥೆರಪಿ ಕಾಲೇಜಿಗೆ ಒಟ್ಟು 28 ರ್‍ಯಾಂಕುಗಳು, ಎಸ್.ಡಿ.ಎಂ ನರ್ಸಿಂಗ್ ಕಾಲೇಜಿಗೆ ಒಟ್ಟು 20 ರ್‍ಯಾಂಕುಗಳು ಗಳಿಸಿವೆ.

ಇದರೊಂದಿಗೆ ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ಪದವಿ ಪರೀಕ್ಷೆಗಳಲ್ಲಿ ಮಂಗಳೂರಿನ ಎಸ್.ಡಿ.ಎಂ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜು ಒಟ್ಟು 4 ರ್‍ಯಾಂಕ್, ಎಂ.ಬಿ.ಎ ಪರೀಕ್ಷೆಯಲ್ಲಿ ಮಂಗಳೂರಿನ ಎಸ್.ಡಿ.ಎಂ ಮ್ಯಾನೇಜ್‌ಮೆಂಟ್ ಸ್ಟಡೀಸ್ ಆಂಡ್ ರೀಸರ್ಚ್ (ಸ್ನಾತಕೋತ್ತರ) ಕೇಂದ್ರ1ರ್‍ಯಾಂಕ್, ಉಜಿರೆಯಲ್ಲಿರುವ ಎಸ್.ಡಿ.ಎಂ ಬಿ.ಎಡ್ ಕಾಲೇಜು 2ರ್‍ಯಾಂಕ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) ನಡೆಸಿದ ಬಿ.ಇ ಪರೀಕ್ಷೆಯಲ್ಲಿ ಉಜಿರೆಯ ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯವು 2 ರ್‍ಯಾಂಕ್ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯು 2017.2018 ಮತ್ತು 2019 ಶೈಕ್ಷಣಿಕ ಸಾಲಿನಲ್ಲಿ ನಡೆಸಿದ ಕಾನೂನು ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಮಂಗಳೂರಿನ ಎಸ್. ಡಿ. ಎಂ. ಕಾನೂನು ಮಹಾವಿದ್ಯಾಲಯವು ಒಟ್ಟು ೧೭ ರ್‍ಯಾಂಕುಗಳನ್ನು ಗಳಿಸಿ ಸಂಸ್ಥೆಯ ಹಿರಿಮೆ ಹೆಚ್ಚಿಸಿವೆ.

ಹೀಗೆ ಈ ಎಲ್ಲಾ ಸಂಸ್ಥೆಗಳು ಅತ್ಯುನ್ನತ ರ್‍ಯಾಂಕ್‌ಗಳನ್ನು ಗಳಿಸುವ ಮೂಲಕ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಗುಣಮಟ್ಟದ ಶಿಕ್ಷಣಕ್ಕೆ ಕನ್ನಡಿ ಹಿಡಿದಿವೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಆಡಳಿತ ಮಂಡಳಿಯ ಸದಸ್ಯರು ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

 

Related posts

Leave a Reply

Your email address will not be published. Required fields are marked *