Header Ads
Breaking News

ಎಸ್.ಡಿ.ಎಂ ಸಿಬ್ಬಂದಿ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ಉದ್ಘಾಟನೆ ಹಾಗೂ ಇದರ ಮೊದಲ ವಾರ್ಷಿಕ ಮಹಾಸಭೆ

ಉಜಿರೆ ಶ್ರೀ ಧ.ಮ ಕಾಲೇಜಿನಲ್ಲಿ ಇತ್ತೀಚೆಗೆ ಎಸ್.ಡಿ.ಎಂ ಸಿಬ್ಬಂದಿ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ಉದ್ಘಾಟನೆ ಹಾಗೂ ಇದರ ಮೊದಲ ವಾರ್ಷಿಕ ಮಹಾಸಭೆ ಜರುಗಿತು.
ಎಸ್,ಡಿ,ಎಮ್. ಉದ್ಯೋಗಿಗಳ ಕ್ಷೇಮಾಭಿವೃದ್ದಿ ಹಾಗು ಕಿರಿ ಸದಸ್ಯರಿಗೆ ಆರ್ಥಿಕ ವಹಿವಾಟು ಉದ್ದೇಶಿತ ಈ ನೋಂದಾಯಿತ ಸಂಸ್ಥೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಸತೀಶ್ಚಂದ್ರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಸಹೋದ್ಯೋಗಿಗಳ ನಡುವೆ ಉತ್ತಮ ಸಂಂಧ ಸಹಕಾರ ಆತ್ಮೀಯತೆಯ ದೃಷ್ಟಿಯಿಂದ ಕಾಲೇಜು ಆರಂಭದ ವರ್ಷಗಳಲ್ಲಿ ಅನೇಕ ಹಿರಿಯ ಪ್ರಾಧ್ಯಾಪಕರು ಕ್ಷೇಮಾಭಿವೃದ್ದಿ ಸಂಸ್ಥೆಯನ್ನು ಹುಟ್ಟು ಹಾಕಿದರು. ಆ ಮೂಲಕ ಸಿಬ್ಬಂದಿಗಳ ಪಾಲಿಗೆ ಉಪಯುಕ್ತ ಸಂವನ್ನಾಗಿ ಬೆಳೆಸಿದರು.

ಗಿಡವಾಗಿದ್ದ ಕಾಲೇಜು ಇಂದು ಹೆಮ್ಮರವಾಗಿದೆ ಹಿರಿಯರು ಹಾಕಿಕೊಟ್ಟ. ಉತ್ತಮ ಸಂಸ್ಕಾರ ಸಂಸ್ಕೃತಿಯ ಫಲವಾಗಿ ಇಂದು ಕೂಡ ಸಿಬ್ಬಂದಿಗಳಲ್ಲಿ ಪರಸ್ಪರ ಅನ್ಯೋನ್ಯತೆ ಸಂಘಟನೆ ಮುಂದುವರಿದಿದೆ. ಅದಕ್ಕೆ ಪೂರಕವಾಗಿ ಈ ನೂತನ ಸಂಸ್ಥೆ ಸದಸ್ಯರಿಗೆ ಪ್ರಯೋಜನಕಾರಿಯಾಗಲೆಂದು ಹಾರೈಸಿದರು.

ಶ್ರೀ ಧರ ಭಟ್ ಅವರು ಈ ನೂತನ ಸಂಸ್ಥೆಯ ಅಧ್ಯಕ್ಷರಾಗಿದ್ದೂ ಡಾ.ವಿಶ್ವನಾಥ ಅವರು ಉಪಧ್ಯಕ್ಷರಾಗಿದ್ದಾರೆ. ಡಾ,ಬಿ.ಎ ಕುಮಾರ್ ಹಗ್ಡೆ ಗಜಾನನ ಭಟ್ ಪ್ರಮೋದ್ ಕುಮಾರ್ ನವೀನ್ ಕುಮಾರ್ ಡಾ.ವಂದನಾ ಜೈನ್ ದಿವ್ಯ ಕುಮಾರಿ ತುಕಾರಾಮ್ ಸಾಲಿಯಾನ್ ಎಮ್.ಕೇಶವ , ಅಡಿಯ ರೊಡ್ರಿಗಸ್,ದಿನೇಶ್ ನಾಯ್ಕ ಎಚ್ ಅವರು ನಿರ್ದೇಶಕರಾಗಿ ನಿಯುಕ್ತಿಗೊಂಡಿದ್ದಾರೆ. ಎಸ್.ಡಿ.ಎಮ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ದಿನೇಶ್ ಚೌಟ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಯೋಟೆಕ್ನೋಲಜಿ ವಿಭಾಗದ ಸಹನಾ ಪ್ರಾಥನೆ ಗೀತೆ ಹಾಡಿದರು, ಶ್ರೀಧರ್ ಭಟ್ ಸ್ವಾಗತಿಸಿ, ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಸಿದರು.ದಿವ್ಯ ಕುಮಾರಿ ವಂದಿಸಿದರು.

Related posts

Leave a Reply

Your email address will not be published. Required fields are marked *