Breaking News

ಎಸ್ ಬಿ ಐ ಬ್ಯಾಂಕ್ ವಿರುದ್ದ ಡಿ ವೈ ಎಫ್ ಐ ಪ್ರತಿಭಟನೆ

ಮಂಜೇಶ್ವರ: ಎಸ್ ಬಿ ಐ ಬ್ಯಾಂಕಿನಲ್ಲಿ ತೆಗೆಯುತ್ತಿರುವ ಸರ್ವೀಸ್ ಚಾರ್ಜ್ ನ್ನು ರದ್ದು ಗೊಳಿಸಬೇಕು, ಬ್ಯಾಂಕ್ ಕನಿಷ್ಟ ಉಳಿಕೆಯ ಸಂಖ್ಯೆ 5000 ರೂ. ಮಾಡುರುವುದನ್ನು ಹಿಂದಕ್ಕೆ ಪಡೆಯಬೇಕು, ಎಟಿಎಂ ನಲ್ಲಿ ಹಣವನ್ನು ಪಡೆಯುವಾಗ 20 ರೂ. ವಿಧಿಸಿರುವುದನ್ನು ಹಿಂಪಡೆಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾಧ್ಯಂತ ಎಸ್ ಬಿ ಐ ಬ್ಯಾಂಕ್ ಕಚೇರಿ ಮುಂಬಾಗದಲ್ಲಿ ನಡೆಯುತ್ತಿರುವ ಧರಣಿಯ ಭಾಗವಾಗಿ ಮಂಜೇಶ್ವರ ಬ್ಲೋಕ್ ಡಿ ವೈ ಎಫ್ ಐ ನೇತೃತ್ವದಲ್ಲಿ ಮಂಜೇಶ್ವರ ಎಸ್ ಬಿ ಐ  ಕಚೇರಿ ಮುಂಬಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು.ಧರಣಿಯನ್ನು ಡಿ ವೈ ಎಫ್ ಐ ಮಂಜೇಶ್ವರ ಬ್ಲೋಕ್ ಕಾರ್ಯದರ್ಶಿ ಸಾದಿಕ್ ಚೆರುಗೋಳಿ ಉದ್ಘಾಟಿಸಿದರು.ಈ ಸಂದರ್ಭ ಅಕ್ಷಯ ಎಲಿಯಾನ ಅಧ್ಯಕ್ಷತೆ ವಹಿಸಿದರು. ಅಶ್ರಫ್ ಕುಂಜತ್ತೂರು, ಮುನ್ನಿ ತೂಮಿನಾಡು, ಯಾಕೂಬ್ ಕುಂಜತ್ತೂರು, ಪ್ರಶಾಂತ್ ಕನಿಲ, ಪ್ರಜ್ವಲ್ ಮೊದಲಾದವರು ಮಾತನಾಡಿದರು. ಪ್ರತಿಭಟನೆಗೂ ಮುನ್ನ ಹೊಸಂಗಡಿ ಜಂಕ್ಷನ್ ನಿಂದ ಪ್ರತಿಭಟನಾ ಮೆರವಣಿಗೆ ನಡೆದಿದೆ. 

Related posts

Leave a Reply