Header Ads
Header Ads
Breaking News

ಎ.ಜೆ. ಆಸ್ಪತ್ರೆ ವತಿಯಿಂದ ’ಕುವಾಕಾನ್-2018 ಮಂಗಳೂರು’ ಸಮ್ಮೇಳನ

ಮಂಗಳೂರಿನ ಕುಂಟಿಕಾನದಲ್ಲಿರುವ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಮಂಗಳೂರು ಯುರೋಲಜಿ ಫಾರಂನ ಜಂಟಿ ಆಶ್ರಯದಲ್ಲಿ 23ನೇ ವರ್ಷದ ಕರ್ನಾಟಕ ಯೂರೋಲಜಿ ಅಸೋಸಿಯೇಶನ್‌ನ ಸಮ್ಮೇಳನ ’ಕುವಾಕಾನ್-2018’ ನಡೆಯಿತು. ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಯೂರೋಲಜಿ, ಆಂಡ್ರಾಲಜಿ ಮತ್ತು ರೀನಲ್ ಟ್ರಾನ್ಸ್‌ಪ್ಲಾಂಟೇಷನ್ ವಿಭಾಗದ ವತಿಯಿಂದ ಎಜೆ ಆಸ್ಪತ್ರೆಯ ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಜೆಸ್ಟೀಸ್ ಪಿ. ವಿಶ್ವನಾಥ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವೈದ್ಯಕೀಯ ವೃತ್ತಿ ಎನ್ನುವುದು ತುಂಬಾ ಗೌರವಯುತವಾದ ಹುದ್ದೆ ಎನ್ನುವ ಭಾವನೆ ಜನರಲ್ಲಿದೆ. ಪ್ರತಿಯೊಬ್ಬ ಯುವ ವಿದ್ಯಾರ್ಥಿಯ ಮೊದಲ ಪ್ರಾಶಸ್ತ್ಯ ತಾನೊಬ್ಬ ವೈದ್ಯನಾಗಬೇಕು ಎಂಬುದಾಗಿರುತ್ತದೆ. ಯಾಕೆಂದರೆ ಈ ಮೂಲಕ ಸಮಾಜಕ್ಕೊಂದು ಸೇವೆ ಸಲ್ಲಿಸಬಹುದೆಂಬ ಮನೋಭಾವ ಅವರಲ್ಲಿರುತ್ತದೆ. ವೈದ್ಯಸಮೂಹವು ಈ ಒಂದು ಗೌರವಯುತ ಭಾವನೆಯನ್ನು ಉಳಿಸಿಕೊಂಡು ಬಂದಿದೆ ಎಂದು ಅಭಿಪ್ರಾಯಪಟ್ಟರು. ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎ.ಜೆ ಶೆಟ್ಟಿ ಅವರು ಮಾತನಾಡಿ, ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.ಇದೇ ವೇಳೆ ಎಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಕ್ಕೆ ಸಂಬಂಧಪಟ್ಟ ಸಿಡಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಈ ಸಂದರ್ಭ ಕರ್ನಾಟಕ ಯೂರೋಲಾಜಿ ಅಸೋಸಿಯೇಶನ್‌ನ ಅಧ್ಯಕ್ಷರಾದ ಡಾ. ಎಸ್.ಬಿ. ಪಾಟೀಲ್, ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಅಶೋಕ್ ಹೆಗ್ಡೆ, ಕರ್ನಾಟಕ ಯೂರೋಲಾಜಿ ಅಸೋಸಿಯೇಶನ್‌ನ ಕಾರ್ಯದರ್ಶಿ ಡಾ. ನಿಶ್ಚಿತ್ ಡಿಸೋಜಾ, ಕಾರ್ಯಕ್ರಮ ಸಂಯೋಜಕ ಡಾ. ಸುನೀಲ್ ಪಿ. ಶೆಣೈ, ಎಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪ್ರಶಾಂತ್ ಮಾರ್ಲ ಕೆ. ಕಾರ್ಯಕ್ರಮದ ಸಹ ಸಂಯೋಜಕ ಡಾ. ಪ್ರೀತಮ್ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply