Header Ads
Header Ads
Header Ads
Breaking News

ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ 33ನೇ ವಾರ್ಷಿಕ ಕ್ರೀಡಾಕೂಟ

ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವ ಮೂಲಕ ಸೋಲು ಗೆಲುವುವನ್ನು ಸಮಾನಾಗಿ ಸ್ವೀಕರಿಸುವುದರೊಂದಿಗೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಡಾ| ಧನೇಶ್ ಕುಮಾರ್ ಕೆ.ಯು. ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯ ಎ.ಬಿ.ಶೆಟ್ಟಿ ಸ್ಮಾರಕ ದಂತ  ಮಹಾವಿದ್ಯಾಲಯದ 33 ನೇ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎ.ಬಿ.ಶೆಟ್ಟಿ ಸ್ಮಾರಕ ದಂತ ವಿeನ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಡೀನ್ ಡಾ| ಯು.ಎಸ್.ಕೃಷ್ಣ ನಾಯಕ್ ಮಾತನಾಡಿ ಕಳೆದ ೩೩ ವರ್ಷಗಳಲ್ಲಿ ಈ ಸಂಸ್ಥೆ ಕ್ರೀಡಾ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದು, ಹಿಂದೆ ಬೇರೆ ಮೈದಾನಗಳ ಮೊರೆ ಹೋಗಬೇಕಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕ್ಷೇಮದ ಮೈದಾನದಲ್ಲಿ ಕ್ರೀಡೋತ್ಸವ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಕ್ರೀಡೆಗೂ ಆದ್ಯತೆ ನೀಡಲಾಗುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಎ.ಬಿ.ಶೆಟ್ಟಿ ಸ್ಮಾರಕ ದಂತ ವಿeನ ಮಹಾವಿದ್ಯಾಲಯದ ಸ್ಥಾಪಕ ಡೀನ್ ಹಾಗೂ ಕ್ಯಾಡ್ಸ್‌ನ ನಿರ್ದೇಶಕ ಡಾ| ಎನ್. ಶ್ರೀಧರ್ ಶೆಟ್ಟಿ, ಉಪ ಪ್ರಾಂಶುಪಾಲೆ ಮಿತ್ರ ಎನ್. ಹೆಗ್ಡೆ, ಸ್ನಾತಕೋತ್ತರ ಅಧ್ಯಯನ ವಿಭಾಗದ ನಿರ್ದೇಶಕ ಡಾ| ಬಿ.ರಾಜೇಂದ್ರ ಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲನಾ ಡೀನ್ ಡಾ| ಶಿಶಿರ್ ಶೆಟ್ಟಿ, ಕ್ರೀಡಾ ಸಲಹೆಗಾರ ಡಾ| ರಾಹುಲ್ ಭಂಡಾರಿ ಉಪಸ್ಥಿತರಿದ್ದರು.
ವರದಿ: ಆರೀಪ್ ಕಲ್ಕಟ್ಟ ಉಳ್ಳಾಲ

Related posts

Leave a Reply