Header Ads
Breaking News

ಎ.ರಾಘವೇಂದ್ರರಾವ್ ರ ವೈವಾಹಿಕ ಜೀವನದ 55ನೇ ವರ್ಷಾಚರಣೆ

 ಸುರತ್ಕಲ್‍ನ ಮುಕ್ಕ ಶ್ರೀನಿವಾಸ್ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನಲ್ಲಿ ಶ್ರೀನಿವಾಸ್ ವಿಶ್ವವಿದ್ಯಾನಿಲಯ ಕುಲಪತಿ, ಮಂಗಳೂರಿನ ಎ.ಶಾಮರಾವ್ ಫೌಂಡೇಶನ್ ಅಧ್ಯಕ್ಷ ಎ.ರಾಘವೇಂದ್ರ ರಾವ್, ಎ.ವಿಜಯಲಕ್ಷ್ಮೀ ಆರ್.ರಾವ್ ದಂಪತಿಯ ಸಹಸ್ರಪೂರ್ಣ ಚಂದ್ರೋದಯ ಸಮಾರಂಭ, ಲೆಕ್ಕಪರಿಶೋಧಕ ವೃತ್ತಿಯ 55ನೇ ವರ್ಷಾಚರಣೆ ಹಾಗೂ ವೈವಾಹಿಕ ಜೀವನದ 55ನೇ ವರ್ಷಾಚರಣೆ ನಡೆಯಿತು.

ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಶ್ಯಾಮ ರಾವ್ ಫೌಂಡೇಶನ್‍ನ ಅಧ್ಯಕ್ಷರಾದ ಎ.ರಾಘವೇಂದ್ರ ರಾವ್, ಎ.ವಿಜಯಲಕ್ಷ್ಮೀ ಆರ್.ರಾವ್ ದಂಪತಿಯ ಸಹಸ್ರಪೂರ್ಣ ಚಂದ್ರೋದಯ ಸಮಾರಂಭ, ಮಾತ್ರವಲ್ಲದೇ ಲೆಕ್ಕಪರಿಶೋಧಕ ವೃತ್ತಿಯ 55ನೇ ವರ್ಷಾಚರಣೆ ಹಾಗೂ ವೈವಾಹಿಕ ಜೀವನದ 55ನೇ ವರ್ಷಾಚರಣೆ ಸಂಭ್ರಮ, ಈ ಪ್ರಯುಕ್ತ ಮುಕ್ಕ ಶ್ರೀನಿವಾಸ್ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಶ್ಯಾಮ ರಾವ್ ಫೌಂಡೇಶನ್‍ನ ಅಧ್ಯಕ್ಷರಾದ ಎ.ರಾಘವೇಂದ್ರ ರಾವ್ ಅವರು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದ್ರು. ಈ ವೇಳೆ ಮಾತನಾಡಿದ ಬ್ಯಾಂಕಿಂಗ್ ಕ್ಷೇತ್ರದ ತಜ್ಞರಾದ ರಾಮರಾವ್ , ಉನ್ನತ ಶಿಕ್ಷಣ ಕ್ಷೇತ್ರದ ಹಲವಾರು ಕಾಲೇಜುಗಳನ್ನು ನಡೆಸುತ್ತಿರುವ ಎ.ರಾಘವೇಂದ್ರ ರಾವ್ ಅವರು ಶಿಕ್ಷಣ ಕ್ಷೇತ್ರದ ಅತ್ಯುನ್ನತ ಸಾಧಕರು ಎಂದು ಬಣ್ಣಿಸಿದ್ದರು.

 ಇದೇ ವೇಳೆ ಎ.ರಾಘವೇಂದ್ರ ರಾವ್ ಹಾಗೂ ಎ.ವಿಜಯಲಕ್ಷ್ಮೀ ಆರ್.ರಾವ್ ದಂಪತಿಗಳಿಗೆ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್.ಲೋಬೋ , ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ್ ಭಟ್, ಸಿಇಒ ಮಹಾಬಲೇಶ್ವರ, ನಿಟ್ಟೆ ವಿಶ್ವವಿದ್ಯಾನಿಲಯ ಸಹಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಸೇರಿದಂತೆ ಮೊದಲಾದವರು ಶುಭಾಶಯ ಕೋರಿದರು.
 ಈ ವೇಳೆ ಶ್ರೀನಿವಾಸ್ ವಿಶ್ವವಿದ್ಯಾನಿಲಯ ಸಹಕುಲಪತಿ ಎ.ಶ್ರೀನಿವಾಸ್ ರಾವ್, ಮಿತ್ರಾ ಎಸ್.ರಾವ್, ಡಾ|ಉದಯಕುಮಾರ್ ಮಯ್ಯ, ಪದ್ಮಿನಿಮಯ್ಯ, ಶ್ರೀನಿವಾಸ್ ವಿಶ್ವವಿದ್ಯಾನಿಲಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಮನೋಜ್‍ಕುಮಾರ್, ಡಾ.ಎ.ಆರ್.ಶಬರಾಯ, ಡಾ.ಉದಯ ಕುಮಾರ್, ಡಾ.ಶ್ರೀನಿವಾಸ ಮಯ್ಯ ಡಿ. ಅಣ್ಣಯ್ಯಕುಲಾಲ್ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮೊದ್ಲು ಎ.ಶಾಮರಾವ್ ಫೌಂಡೇಶನ್ ಅಧ್ಯಕ್ಷ ಎ.ರಾಘವೇಂದ್ರ ರಾವ್, ಎ.ವಿಜಯಲಕ್ಷ್ಮೀ ಆರ್.ರಾವ್ ಅವರನ್ನು ಪಲ್ಲಕ್ಕಿ ವಾಹನದಲ್ಲಿ ಕುಳ್ಳಿರಿಸಿಕೊಂಡು, ಚೆಂಡೆ, ವಾದ್ಯಗೋಷ್ಠಿಯ ಮೂಲಕ ಮೆರವಣಿಯಲ್ಲಿ ಕರೆತರಲಾಯ್ತು.

Related posts

Leave a Reply

Your email address will not be published. Required fields are marked *