Header Ads
Breaking News

ಎ.ವಿ.ರಮಣ್ ಅಕ್ಕರಾಜುರನ್ನು ಭೇಟಿಯಾದ ಶಾಸಕ ಡಾ.ಭರತ್ ಶೆಟ್ಟಿ : ಡ್ರೆಜ್ಜರ್‌ನಿಂದ ಮೀನುಗಾರರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾತುಕತೆ

ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರು ಎನ್‌ಎಂಪಿಟಿ ಚೇರ್‌ಮ್ಯಾನ್ ಎ.ವಿ.ರಮಣ್ ಅಕ್ಕರಾಜು ಅವರನ್ನು ಭೇಟಿಯಾಗಿ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ನಿಲ್ಲಿಸಿರುವ ಡ್ರೆಜ್ಜರ್‌ನಿಂದ ಮೀನುಗಾರರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದರು. ಆ ಡ್ರೆಜ್ಜರ್ ಅನ್ನು ತ್ವರಿತವಾಗಿ ಅಲ್ಲಿಂದ ತೆರವುಗೊಳಿಸಿ ಮೀನುಗಾರ ಸಮುದಾಯದವರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಲು ತಿಳಿಸಿದರು. ಶಾಸಕರೊಂದಿಗೆ ದಕ್ಷಿಣ ಕನ್ನಡ ಮೂಲ ಮೀನುಗಾರರ ಸಂಘಟನೆ ಅಧ್ಯಕ್ಷರಾದ ಅಶ್ವಥ್ ಕಾಂಚನ್, ಉಪಾಧ್ಯಕ್ಷರುಗಳಾದ ನರೇಂದ್ರ ಶ್ರೀಯಾನ್, ಯಾದವ್ ಸಾಲ್ಯಾನ್, ಸಂಚಾಲಕರಾದ ಚಂದ್ರಶೇಖರ್ ಶ್ರೀಯಾನ್ ಗುಡ್ಡೆಕೊಪ್ಲ, ಬಿಜೆಪಿ ಮುಖಂಡ ನವೀನ್ ಕಾಂಚನ್ ಸಹಿತ ಸಂಘಟನೆಯ ಅನೇಕ ಸದಸ್ಯರು ಉಪಸ್ಥಿತರಿದ್ದರು. ತಮ್ಮ ಕೋರಿಕೆಯನ್ನು ಶೀಘ್ರದಲ್ಲಿ ಸ್ಪಂದಿಸಿ ಎನ್ ಎಂಪಿಟಿ ಚೇರ್ ಮೆನ್ ಅವರೊಂದಿಗೆ ಸಭೆ ಆಯೋಜಿಸಿ ತಾವು ಅನುಭವಿಸುತ್ತಿರುವ ತೊಂದರೆಯನ್ನು ಪರಿಹರಿಸಲು ಸಹಕರಿಸಿದ ಶಾಸಕ ಡಾ.ಭರತ್ ಶೆಟ್ಟಿಯವರಿಗೆ ಮೀನುಗಾರ ಮುಖಂಡರು ಧನ್ಯವಾದ ಅರ್ಪಿಸಿದ್ದಾರೆ.

Related posts

Leave a Reply

Your email address will not be published. Required fields are marked *