Header Ads
Header Ads
Header Ads
Breaking News

ಎ ಸದಾನಂದ ಶೆಟ್ಟಿ ಅವರಿಗೆ 75ರ ಸಂವತ್ಸರ ಮೂಡಬಿದರೆಯಲ್ಲಿ ಸದಾಭಿನಂದನೆ ಕಾರ್ಯಕ್ರಮ ಸೆಪ್ಟಂಬರ್ 2ರಂದು ನಡೆಯಲಿರುವ ಕಾರ್ಯಕ್ರಮ

 

ಆಂಕರ್: ಶಿಕ್ಷಣ, ಕ್ರೀಡೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದಿರುವ ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್ ಅದ್ಯಕ್ಷ ಸದಾನಂದ ಶೆಟ್ಟಿ ಅವರಿಗೆ 75 ಸಂವತ್ಸರ ತುಂಬುತ್ತಿರುವ ಹಿನ್ನೆಲೆಯಲ್ಲಿ ಮೂಡಬಿದ್ರಿಯಲ್ಲಿ ಸದಾಭಿನಂದನೆ ಎನ್ನುವ ಅಭಿನಂದನಾ ಕಾರ್ಯಕ್ರಮ ಸೆಪ್ಟಂಬರ್ ಎರಡರಂದು ನಡೆಯಲಿದೆ.

ಈ ಕುರಿತು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸದಾಭಿನಂದನಾ ಸಮಿತಿ ಸಂಚಾಲಕ ಭಾಸ್ಕರ್ ರೈ ಕುಕ್ಕವಳ್ಳಿ ಮಾತನಾಡಿ, ಎಲ್ಲಾ ವರ್ಗಕ್ಕೂ ಪ್ರೀತಿ ಪೂರ್ವಕವಾಗಿದ್ದಾರೆ. ಸಮಾಜ ಸೇವೆ, ಶಿಕ್ಷಣ ಕ್ಷೇತ್ರ, ಕ್ರೀಡಾ ಕ್ಷೇತ್ರ, ಉದ್ಯಮ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿದ್ದಾರೆ ಅಂತಾ ಹೇಳಿದ್ರು. ಇನ್ನೂ ಸದಾನಂದ ಶೆಟ್ಟಿ ಹಾಗೂ ಮೈನಾ ಶೆಟ್ಟಿ ದಂಪತಿಗಳ ನ್ನು ದಿಬ್ಬಣದ ಮೂಲಕ ವೇದಿಕೆಗೆ ಕರೆತರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಈ ವೇಳೆ ಸದಾಭಿನಂದನಾ ಸಮಿತಿ ಸಂಚಾಲಕರಾದ ಕೊಡ್ಮಾಣ್ ರಾಮಚಂದ್ರ ಶೆಟ್ಟಿ, ದೇವಿಚರಣ್ ಶೆಟ್ಟಿ, ರಾಜ್ ಗೋಪಾಲ್ ರೈ, ಸಮಿತಿ ಪ್ರಧಾನ ಕಾರ್ಯದರ್ಶಿ ಲೀಲಾಕ್ಷ ಕರ್ಕೇರ ಮತ್ತಿತರು ಉಪಸ್ಥಿತರಿದ್ದರು.
ವರದಿ: ನಾಗೇಶ್ ಕಾವೂರು ಮಂಗಳೂರು

Related posts

Leave a Reply