Header Ads
Breaking News

ಎ.27, 28ರಂದು ದೇರಳಕಟ್ಟೆಯಲ್ಲಿ ಅಖಿಲ ಭಾರತ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾಟ ಆಯೋಜನೆ

ಕಾಸ್ಕ್ ನರಿಂಗಾನ ಕ್ಲಬ್, ಭಾರತ ಕರ್ನಾಟಕದ ಅಮೇಚೂರ್ ಕಬಡ್ಡಿ ಫೆಡರೇಷನ್, ದಕ್ಷಿಣ ಕನ್ನಡ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ಅಖಿಲ ಭಾರತ ಮಟ್ಟದ “ಎ” ಗ್ರೇಡ್ ಕಬಡ್ಡಿ ಪಂದ್ಯಾಟವು ಎಪ್ರಿಲ್ 27 ಮತ್ತು 28ರಂದು ನಡೆಯಲಿದೆ ಎಂದು ಎಷ್ಯಾನ್ ಗೋಲ್ಡ್ ಮೆಡಲಿಸ್ಟ್ ಜಗದೀಶ್ ಕುಂಬ್ಳೆ ತಿಳಿಸಿದರು.

ಈ ಬಗ್ಗೆ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಖಿಲ ಭಾರತ ಮಟ್ಟದ ಎ ಗ್ರೇಡ್ ಕಬ್ಬಡ್ಡಿ ಪಂದ್ಯಾಟ ದೇರಳಕಟ್ಟೆಯ ಸಿಟಿ ಗ್ರೌಂಡ್‍ನಲ್ಲಿ ನಡೆಯಲಿದ್ದು, ಸುಮಾರು 70ಕ್ಕೂ ಅಧಿಕ ಪ್ರೋ ಕಬಡ್ಡಿ ಪಟುಗಳು ಭಾಗವಹಿಸಿಲಿದ್ದಾರೆ. ಭಾರತದ ಅಗ್ರಗಣ್ಯ 8 ತಂಡಗಳು ಭಾಗವಹಿಸಲಿದ್ದು ಆಳ್ವಾಸ್‍ನ ಕಾಲೇಜಿನ ತಂಡ ಕೂಡ ಭಾಗವಹಿಸಲಿದೆ. ಕಾಸ್ಕ್ ನರಿಂಗಾನ ಕ್ಲಬ್ 9 ವರ್ಷಗಳಿಂದ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಊರಿನ ಬಡ ಯುವತಿಯರ ಮದುವೆಗೆ ಧನ ಸಹಾಯ ಮುಂತಾದ ಅನೇಕ ಸಮಾಜ ಸೇವೆ ಮಾಡುತ್ತಾ ಬಂದಿದೆ ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ರತನ್ ಶೆಟ್ಟಿ, ಇಕ್ಬಾಲ್, ಅಶ್ರಫ್ ಮಲಾರ್, ನವಾಝ್ ಎಂ.ಬಿ. ಮೊಹಿದ್ದೀನ್ ಶಮೀರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *