Header Ads
Breaking News

ಏಕಾಏಕಿ ಭಟ್ಟರಿಗೆ ಶೋಭಾ ಮೇಲೆ ಹೇಗೆ ವ್ಯಾಮೋಹ ಹುಟ್ಟಿತು?: ಪ್ರಮೋದ್ ಮಧ್ವರಾಜ್ ಪ್ರಶ್ನೆ

ರಘುಪತಿ ಭಟ್ಟರು ಇಲ್ಲಿಯವರೆಗೆ ಶೋಭಾ ಕರಂದ್ಲಾಜೆಯವರ ಒಂದೇ ಒಂದು ಫೋಟೋವನ್ನು ಫ್ಲೆಕ್ಸ್‌ಗೆ ಹಾಕಿಲ್ಲ. ಅವರ ಬಳಿ ಮಾತನಾಡುತ್ತಿರಲಿಲ್ಲ. ಶೋಭಾ ಮುಖವನ್ನು ನೋಡುತ್ತಿರಲಿಲ್ಲ. ಶೋಭಾ ಕರಂದ್ಲಾಜೆ ಇದ್ದ ಸಭೆಗೆ ಹೋಗುತ್ತಿರಲಿಲ್ಲ. ಇದೀಗ ಶೋಭಾ ಬಗ್ಗೆ ರಘುಪತಿ ಭಟ್ಟರಿಗೆ ಒಮ್ಮೇಲೆ ವ್ಯಾಮೋಹ ಹೇಗೆ ಹುಟ್ಟಿತು ಎಂದು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪ್ರಶ್ನಿಸಿದ್ದಾರೆ.

ಅವರು ಕುಂದಾಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಬಳಿಕ ತಮ್ಮ ವಿರುದ್ದ ರಘುಪತಿ ಭಟ್ ಅವರ ಸರಣಿ ಟೀಕೆಗಳಿಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತಾ, ರಘುಪತಿ ಭಟ್ ಅವರಿಗೆ ನನ್ನ ಬಗ್ಗೆ ತಲೆಬಿಸಿ ಬೇಡ ಎಂದರು.
ಕಾಂಗ್ರೆಸ್‌ನಲ್ಲಿ ಯಾವುದೇ ಬಂಡಾಯವಿಲ್ಲ. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು ಚಿಹ್ನೆಯಿಂದ ಯಾವುದೇ ಸಮಸ್ಯೆಯೂ ಇಲ್ಲ. ಕೆಲಸ ಮಾಡುವ ಕ್ಷೇತ್ರದೊಳಗಿನ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು.

Related posts

Leave a Reply

Your email address will not be published. Required fields are marked *