Header Ads
Breaking News

ಏಕಾ ಏಕಿ ಕೃಷ್ಣ ಮಠದ ಆನೆ ಸುಭದ್ರೆ ಹೊನ್ನಾಳಿಗೆ ರವಾನೆ : ಮಾವುತ ಬೇಸರ

ಕೃಷ್ಣ ಮಠದ ಆನೆ ಸುಭದ್ರೆಯನ್ನ ಹೊನ್ನಾಳಿಗೆ ಬೆಳಂಬೆಳಗ್ಗೆ ರವಾನೆ ಮಾಡಲಾಗಿದೆ. ಏಕಾ ಏಕಿ ಆನೆ ರವಾನೆ ಮಾಡಿರುವ ಬಗ್ಗೆ ಇದೀಗ ಗೊಂದಲವೂ ಏರ್ಪಟ್ಟಿದೆ. ಕೃಷ್ಣ ಮಠದ ಆನೆ ಸುಭದ್ರೆ ಈ ಹಿಂದೆ ಮಠದಲ್ಲಿದ್ದ ಸಂದರ್ಬದಲ್ಲಿ ಅನಾರೋಗ್ಯದ ಕಾರಣ ಸಕ್ರಬೈಲು ಕ್ಯಾಂಪ್ ಕಳುಹಿಸಲಾಗಿತ್ತು. ಕಾಲಿಗೆ ಗಾಯ ಸೇರಿದಂತೆ ಡಯಾಬಿಟಿಸ್ ನಿಂದ ಬಳಲುತ್ತಿದ್ದ 29 ವರ್ಷದ ಸುಭದ್ರೆಯನ್ನ ಈ ಹಿಂದಿನ ಮಾವುತ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಸಕ್ರೈಬೈಲು ಕ್ಯಾಂಪ್ ನಿಂದ ಗುಣಮುಖವಾಗಿದ್ದ ಸುಭದ್ರೆಯನ್ನ ಮತ್ತೆ ಕೃಷ್ಣ ಮಠಕ್ಕೆ ತರಲಾಗಿತ್ತು. ಸುಮಾರು7ತಿಂಗಳ ಕಾಲ ಮಠದಲ್ಲಿತ್ತು. ಮಾತ್ರವಲ್ಲದೇ ಆನೆ ನೋಡಿಕೊಳ್ಳಲು ಬೇರೆಯೊಬ್ಬ ಮಾವುತನನ್ನು ನೇಮಿಸಲಾಗಿತ್ತು. ಈಗಿರುವ ಮಾವುತ ಕೂಡಾ ಚೆನ್ನಾಗಿ ಆನೆಯನ್ನ ನೋಡಿಕೊಳ್ಳುತ್ತಿದ್ದು ಕೃಷ್ಣ ಮಠದ ಆನೆಯನ್ನ ಹೊನ್ನಾಳಿಗೆ ರವಾನೆ ಮಾಡಿದಕ್ಕೆ ಬೇಸರ ವ್ಯಕ್ತಪಡಿಸಿದ್ದಾನೆ. ಇಂದು ಬೆಳಗ್ಗೆ 3.30ಕ್ಕೆ ಏಕಾಏಕಿಯಾಗಿ ಆನೆ ರವಾನೆ ಮಾಡಲಾಯಿತು. ದಾವಣೆಗೆರೆ ಜಿಲ್ಲೆಯ ಹೊನ್ನಾಳಿಗೆ ತೆಗೆದುಕೊಂಡು ಹೋಗುವ ಬಗ್ಗೆ ಗೊಂದಲ ವ್ಯಕ್ತವಾಗಿದೆ. ಸಂತಾನಾಭಿವೃದ್ದಿಗಾಗಿ ಆನೆಯನ್ನ ಕಳುಹಿಸುತ್ತಿರುವುದಾಗಿ ಮಠದ ಸಿಬ್ಬಂದಿ ಹೇಳಿದ್ದಾರೆ. ಆದ್ರೆ ಸಂತಾನಾಭಿವೃದ್ದಿ ಸಮಯ ಇದಲ್ಲ. ಆನೆ ಮದವೇರಲು ಇನ್ನೂ ಸಮಯ ಇದೆ. ಈಗ ಕಳುಹಿಸುತ್ತಿರುವುದು ಸರಿಯಲ್ಲ ಈ ವಿಚಾರದಲ್ಲಿ ನ್ಯಾಯ ಬೇಕು ಎಂತ ಮಾವುತ ಹೇಳಿದ್ದಾನೆ.

Related posts

Leave a Reply

Your email address will not be published. Required fields are marked *