Header Ads
Header Ads
Breaking News

ಏಗನ್ ಎಟಿಪಿ ಚಾಲೆಂಜರ್ ಟೆನ್ನಿಸ್, ಎಂಟರ ಘಟ್ಟಕ್ಕೆ ಲಿಯಾಂಡರ್ ಜೋಡಿ

ಭಾರತದ ಲಿಯಾಂಡರ್ ಪೇಸ್ ಹಾಗೂ ಕೆನಡಾದ ಆದಿಲ್ ಶಮಸ್ಡಿನ್ ಜೋಡಿ ಬ್ರಿಟನ್ನಿನ ಇಲಕ್ಸಿಯಲ್ಲಿ ನಡೆಯುತ್ತಿರುವ ಏಗನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ.
ಭಾರತ ಮತ್ತು ಕೆನಡಾ ಜೋಡಿ ಪುರುಷರ ಡಬಲ್ಸ್ ವಿಭಾಗದ ಪ್ರೀ ಕ್ವಾರ್ಟರ್ಫೈನಲ್ನಲ್ಲಿ ೪-೬, ೬-೩, ೧೨-೧೦ರಲ್ಲಿ ಆಸ್ಟ್ರೇಲಿಯಾದ ಮ್ಯಾಡ್ ರಿಡ್ ಮತ್ತು ಜಾನ್ ಪ್ಯಾಟ್ರಿಕ್ ಸ್ಮಿತ್ ಅವರನ್ನು ಮಣಿಸಿತು. ಮುಂದಿನ ಪಂದ್ಯದಲ್ಲಿ ಪೇಸ್ ಜೋಡಿ ಬೆಲಾರಸ್ನ ಆಂಡ್ರಿ ವಸಿಲ್ವಸ್ಕಿ ಮತ್ತು ಚಿಲಿಯ ಹನ್ಸ್ ಕ್ಯಾಸ್ಟಿಲೊ ಅವರೊಂದಿಗೆ ಆಡಲಿದೆ.
ಎರಡನೇ ಶ್ರೇಯಾಂಕದ ಭಾರತದ ಇನ್ನೊಂದು ಜೋಡಿ ಪೂರವ್ ರಾಜಾ ಮತ್ತು ದಿವಿಜ್ ಶರಣ್ ೬-೨, ೬-೪ರಲ್ಲಿ ವಿಕ್ಟರ್ ಎಸ್ಟ್ರೆಲಾಮತ್ತು ಡೆರಿಯನ್ ಕಿಂಗ್ ವಿರುದ್ಧ ಗೆಲುವು ದಾಖಲಿಸಿತು. ದಿವಿಜ್ ಮತ್ತು ಪೂರವ್ ಕ್ವಾರ್ಟರ್ನಲ್ಲಿ ಥಾಯ್ಲೆಂಡ್ನ ಸಂಚೈ ಮತ್ತು ಸಂಚತ್ ಎದುರು ಆಡಲಿದ್ದಾರೆ. ಲಂಡನ್ನಲ್ಲಿ ನಡೆದ ಏಗನ್ ಚಾಂಪಿಯನ್ಷಿಪ್ನ ಮೊದಲ ಸುತ್ತಿನ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಇವಾನ್ ದೊಡಿಗ್ ಜೋಡಿ ೬-೩, ೬-೭, ೧೦-೭ರಲ್ಲಿ ಕೆಲೆ ಎಡ್ಮಂಡ್ ಮತ್ತು ತಾನಸಿ ಕೊಕೊನಕಿನ್ಸ್ ವಿರುದ್ಧ ಗೆಲುವು ಪಡೆಯಿತು.

Related posts

Leave a Reply