Header Ads
Breaking News

ಏಜೆನ್ಸಿಗಳ ಕೋಡ್ ಬಳಸಿ ನಕಲಿ ವಾಹನ ವಿಮೆ ನೀಡಿದ ಪ್ರಕರಣ : ಸಮಗ್ರ ತನಿಖೆ ನಡೆಸುವಂತೆ ಪುತ್ತೂರು ಶಾಸಕ ನಿರ್ದೇಶನ

ಅನಧಿಕೃತ ಏಜೆನ್ಸಿಗಳ ಕೋಡ್ ಅನ್ನು ಬಳಸಿ ನಕಲಿ ವಾಹನ ವಿಮೆ ನೀಡಿದ ಪ್ರಕರಣಕ್ಕೆ ಸಂಬಂದಿಸಿ ವಿಮೆ ತಯಾರಿಸಿ ತಪ್ಪು ಒಪ್ಪಿಕೊಂಡಿರುವ ದಲ್ಲಾಳಿ ವಿರುದ್ಧ ತತ್‍ಕ್ಷಣ ದೂರು ದಾಲಿಸುವಂತೆ ಹಾಗೂ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಶಾಸಕ ಸಂಜೀವ ಮಠಂದೂರು ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ನಕಲಿ ವಿಮೆ ಹಾವಳಿ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಪುತ್ತೂರಿನ ಪ್ರವಾಸಿ ಮಂದಿರದಲ್ಲಿ ಆರ್‍ಟಿಓ, ವಿಮಾ ಕಂಪೆನಿ, ಸಂಚಾರ ಪೊಲೀಸರ ಉಪಸ್ಥಿತಿಯಲ್ಲಿ ಸಭೆ ನಡೆಸಿದರು.
ಇದೊಂದು ಗಂಭೀರ ಸಮಸ್ಯೆ. ನಕಲಿ ವಿಮೆ ನೀಡುವುದರಿಂದ ಅಪಘಾತ ಪ್ರಕರಣಗಳು ಸಂಭವಿಸಿದ ಸಂದರ್ಭ ವಿಮಾದಾರನಿಗೆ ಯಾವುದೇ ರೀತಿಯ ಪರಿಹಾರ ಸಿಗುವುದಿಲ್ಲ. ಹೀಗಾಗಿ ನಕಲಿ ವಿಮೆ ಜಾಲದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರ ಹಿಂದೆ ಇರುವ ಜಾಲವನ್ನು ಬೇಧಿಸಬೇಕು ಎಂದು ಶಾಸಕರು ಆರ್‍ಟಿಓ, ಸಂಚಾರ ಪೊಲೀಸರಿಗೆ ಸೂಚಿಸಿದರು.

ನಕಲಿ ವಿಮೆ ವ್ಯಾಪಕವಾಗಿರುವ ಶಂಕೆ ಇದ್ದು, ಆರ್‍ಟಿಓ, ಸಂಚಾರ ಪೊಲೀಸರು ಕ್ಯು ಆರ್ ಕೋಡ್ ಬಳಸಿ ವಿಮಾ ಪತ್ರದ ಅಸಲಿಯತ್ತನ್ನು ಖಾತರಿಪಡಿಸಿಕೊಳ್ಳಬೇಕು. ವಾಹನ ದಾಖಲೆ ತಪಾಸಣೆ ಸಂದರ್ಭ ವಿಮಾ ಪತ್ರವನ್ನು ಕ್ಯೂ ಆರ್ ಕೋಡ್‍ನಿಂದಲೇ ಪರಿಶೀಲಿಸಬೇಕು. ಅದಕ್ಕೆ ಬೇಕಾದ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳುವಂತೆ ಶಾಸಕ ಸಂಜೀವ ಮಠಂದೂರು ಅವರು ಅಧಿಕಾರಿಗಳಿಗೆ ಸೂಚಿಸಿದರು.

Related posts

Leave a Reply

Your email address will not be published. Required fields are marked *