Breaking News

ಏನೆಕಲ್ಲು ಹೊಳೆಗೆ ಬಿದ್ದು ಇಬ್ಬರು ದುರ್ಮರಣ

ಏನೆಕಲ್ಲು ಹೊಳೆಗೆ ಬಿದ್ದು ಇಬ್ಬರು ಮೃತ ಪಟ್ಟ ಘಟನೆ ನಡೆದಿದೆ. ಏನೆಕಲ್ಲು ಗ್ರಾಮದ ಆನಂದ ಗೌಡ ಬಾನಡ್ಕ ಮತ್ತು ಅವರ ಅಳಿಯ ಬೆಂಗಳೂರಿನಲ್ಲಿ ನೆಲೆಸಿರುವ ಸುನಿಲ್ ಮೃತಪಟ್ಟ ದುರ್ದೈವಿಗಳು. ಇಬ್ಬರೂ ಏನೆಕಲ್ಲು ಹೊಳೆಗೆ ಮೀನಿಗೆ ಬಲೆ ಹಾಕಲು ಹೋಗಿದರೆನ್ನಲಾಗಿದೆ. ಸುನಿಲ್ ನೀರಲ್ಲಿ ಮುಳುಗಿ ಅಪಾಯಕೊಳಗಾದಾಗ ಅವರನ್ನು ರಕ್ಷಿಸಲು ಹೋದ ಆನಂದ ಗೌಡರು ಕೂಡ ಮುಳುಗಿ ಸಾವಿಗೀಡಾದರೆಂದು ತಿಳಿದುಬಂದಿದೆ. ಆನಂದ ಗೌಡರು ಮಾಗಣೆ ಗೌಡರಾಗಿದ್ದು ಊರಿನಲ್ಲಿ ಜನಾನುರಾಗಿ ವ್ಯಕ್ತಿಯಾಗಿದ್ದರು. ಅಳಿಯ ಸುನಿಲ್ ಆನೆಗುಂಡಿಯವರಾಗಿದ್ದು ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು.

Related posts

Leave a Reply