Breaking News

ಏರಿದ ಶೇರು ಮತ್ತು ರೂಪಾಯಿ, ದಾಖಲೆ ಕಂಡ ನಿಫ್ಟಿ

ದೇಶದ ಷೇರುಪೇಟೆಗಳ ಮೇಲೆ ಸೈಬರ್ ದಾಳಿ ಯಾವುದೇ ರೀತಿಯ ಋಣಾತ್ಮಕ ಪರಿಣಾಮ ಬೀರಿಲ್ಲ. ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳು ಸೋಮವಾರದ ವಹಿವಾಟಿನಲ್ಲಿ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬಿ‌ಎಸ್‌ಇ ೧೩೪ ಅಂಶ ಏರಿಕೆ ಕಂಡು, ಗರಿಷ್ಠ ಮಟ್ಟವಾದ ೩೦,೨೫೧ ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ೪೪ ಅಂಶ ಏರಿಕೆ ಕಂಡು, ಹೊಸ ಗರಿಷ್ಠ ಮಟ್ಟವಾದ ೯,೪೪೫ ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ೨೦೧೬-೧೭ರ ನಾಲ್ಕನೇ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ವಲಯದ ಆರ್ಥಿಕ ಸಾಧನೆ ಮಾರುಕಟ್ಟೆ ನಿರೀಕ್ಷೆಯಂತೆ ಉತ್ತಮವಾಗೇ ಇದೆ.
ಇನ್ನು ಏಪ್ರಿಲ್ ತಿಂಗಳ ಚಿಲ್ಲರೆ ಮತ್ತು ಸಗಟು ಹಣದುಬ್ಬರ ಇಳಿಕೆ ಕಂಡಿವೆ. ಇದರಿಂದ ಆರ್ಬಿ‌ಐ ಬ್ಯಾಂಕ್ಗಳಿಗೆ ನೀಡುವ ಸಾಲದ ಬಡ್ಡಿ ದರದಲ್ಲಿ ಕಡಿತವಾಗುವ ನಿರೀಕ್ಷೆ ಹೆಚ್ಚಾಗಿದೆ. ಈ ಸಕಾರಾತ್ಮಕ ಅಂಶಗಳು ಸೂಚ್ಯಂಕಗಳ ಏರಿಕೆಗೆ ನೆರವಾದವು. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ೨೬ ಪೈಸೆಗಳಷ್ಟು ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ರೂ. ೬೪.೦೫ರಂತೆ ವಿನಿಮಯಗೊಂಡಿತು. ೨೦೧೫ ಆಗಸ್ಟ್ ೧೦ರನಂತರ ಗರಿಷ್ಠ ದಾಖಲಾಗಿರುವ ಗರಿಷ್ಠ ಮಟ್ಟ ಇದಾಗಿದೆ.

Related posts

Leave a Reply