Header Ads
Header Ads
Breaking News

ಏಳು ಮೀನುಗಾರರ ನಾಪತ್ತೆ ಪ್ರಕರಣ : ಬೊಬ್ಬರ್ಯ ದೈವದ ಮೊರೆ ಹೋದ ಕುಟುಂಬಸ್ಥರು

ಏಳು ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಕಾರದ ವಿರುದ್ದ ದೈವವೂ ಮುನಿಸಿಕೊಂಡಿದೆ. ಮೀನುಗಾರರ ನಾಪತ್ತೆಯ ವಿಚಾರದಲ್ಲಿ ಸರಕಾರ ಏನೂ ಕ್ರಮ ಕೈಗೊಂಡಿಲ್ಲ ಅಂತ ದೈವ ನುಡಿ ಹೇಳಿದೆ.

ಮೀನುಗಾರರ ನಾಪತ್ತೆಯ ಹಿನ್ನಲೆಯಲ್ಲಿ ಬಡನಿಡಿಯೂರಿನಲ್ಲಿರುವ ದೈವ ಸ್ಥಾನಕ್ಕೆ ಸಮಸ್ತ ಮೀನುಗಾರರು ತೆರಳಿ ದರ್ಶನ ಸೇವೆ ಸಲ್ಲಿಸಿದ್ದಾರೆ. ಆದಷ್ಟು ಬೇಗ ಮೀನುಗಾರರನ್ನು ಪತ್ತೆ ಮಾಡುವಂತೆ ಬೇಡಿಕೊಂಡಿದ್ದಾರೆ. ಈ ಸಂದರ್ಬದಲ್ಲಿ ದೈವ ನುಡಿ ನೀಡಿದ್ದು ಕಣ್ಮರೆಯಾದವರ ದೇಶದ ಉತ್ತರ ಭಾಗದಲ್ಲಿದ್ದಾರೆ. ಮೀನುಗಾರರಿಂದ ನಾಪತ್ತೆಯಾದವರ ಪತ್ತೆ ಅಸಾಧ್ಯ.ಪೊಲೀಸರು, ಸೈನ್ಯದಿಂದ ಮಾತ್ರ ಪತ್ತೆ ಸಾಧ್ಯ ಎಂದು ನುಡಿ ಅಭಯ ನೀಡಿದೆ. ಮಾತ್ರವಲ್ಲದೇ ಕಣ್ಮರೆಯಾದವರು ಹೊರ ರಾಜ್ಯದವರ ಬಂಧನದಲ್ಲಿದ್ದಾರೆ.ರಾಜ್ಯ ಸರಕಾರ ಪ್ರಕರಣ ಗಂಭೀರತೆಯನ್ನು ಪರಿಗಣಿಸಿಲ್ಲ ಅಂತದೈವ ಬೊಬ್ಬರ್ಯ ಪಾತ್ರಿಯಿಂದ ನುಡಿ ಹೇಳಿಕೆ ಬಂದಿದೆ.ಇನ್ನು ದೈವದ ಹೇಳಿಕೆಗೆ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡೇಗೌಡ ಮಾತನಾಡಿ ಸರಕಾರ ತನ್ನ ಎಲ್ಲಾ ಕ್ರಮವನ್ನು ಮುಂದುವರೆಸಿದೆ. ದೈವದ ಬಗ್ಗೆ ನನಗೆ ಅಪಾರ ಗೌರವವಿದೆ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ. ದೈವ ಇಲ್ಲೇ ಇದ್ದಾರೆ ಅಂತ ಹೇಳಿದರೂ ಅವರನ್ನು ಪತ್ತೆ ಮಾಡುವ ಪ್ರಯತ್ನ ಮಾಡುತ್ತದೆ ಎಂದರು.

Related posts

Leave a Reply