Breaking News

ಏಶಿಯನ್ ಕುಸ್ತಿ ಚಾಂಪಿಯನ್‌ಶಿಪ್, ಸಾಕ್ಷಿ ಮಲ್ಲಿಕ್ ಮತ್ತು ವಿನೇಶ್ ಪೋಗಟ್‌ಗೆ ಬೆಳ್ಳಿ

ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದ ಹೆಮ್ಮೆಯ ಪೈಲ್ವಾನ್ ಸಾಕ್ಷಿ ಮಲ್ಲಿಕ್ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ.
ಮಹಿಳೆಯರ ೬೦ ಕೆಜಿ ವಿಭಾಗದ ಅಂತಿಮ ಸುತ್ತಿನಲ್ಲಿ ಸಾಕ್ಷಿ ೦-೧೦ರಲ್ಲಿ ಜಪಾನ್ನ ರಿಸಾಕೊ ಕವಾಯಿ ಎದುರು ಸೋಲು ಅನುಭವಿಸುವ ಮೂಲಕ ಚಿನ್ನ ಗೆಲ್ಲುವ ಅವಕಾಶದಿಂದ ವಂಚಿತರಾದರು. ಕವಾಯಿ ಅವರು ರಿಯೊ ಒಲಿಂಪಿಕ್ಸ್ನಲ್ಲಿ ೬೩ ಕೆಜಿ ವಿಭಾಗದ ಚಿನ್ನ ಜಯಿಸಿದ್ದರು. ಒಲಿಂಪಿಕ್ಸ್ ಕುಸ್ತಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಯನ್ನು ಸಾಕ್ಷಿ ಹೊಂದಿದ್ದಾರೆ. ಆದರೆ ಇಲ್ಲಿ ಅವರು ಕೇವಲ ೨ ನಿಮಿಷ ೪೪ ಸೆಕೆಂಡುಗಳಲ್ಲೇ ಎದುರಾಳಿಗೆ ಸುಲಭದಲ್ಲಿ ಮಣಿದರು. ಈ ಟೂರ್ನಿಯಲ್ಲಿ ಸಾಕ್ಷಿ ಮೊದಲ ಬಾರಿಗೆ ಮಹಿಳೆಯರ ೬೦ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಈ ಮೊದಲು ಅವರು ೫೮ ಕೆಜಿ ವಿಭಾಗದಲ್ಲಿ ಕಣಕ್ಕಿಳಿ ಯುತ್ತಿದ್ದರು.
ವಿನೇಶ್ ಪೊಗಟ್ ಕೂಡ ಮಹಿಳೆಯರ ೫೫ ಕೆಜಿ ವಿಭಾಗದಲ್ಲಿ ಬೆಳ್ಳಿಗೆ ತೃಪ್ತಿಪಟ್ಟರು. ಸೆಮಿಫೈನಲ್ ಹಣಾಹಣಿಯಲ್ಲಿ ವಿನೇಶ್ ೪-೦ರಲ್ಲಿ ಚೀನಾದ ಕ್ವಿ ಜಾಂಗ್ ದಿವ್ಯಾ ಕಕರನ್ ಮೊದಲ ಬಾರಿಗೆ ಮಹತ್ವದ ಚಾಂಪಿಯನ್ಷಿಪ್ನಲ್ಲಿ ಫೈನಲ್ ಹಂತ ತಲುಪಿದ ಸಾಧನೆ ಮಾಡಿದ್ದಾರೆ. ಮಹಿಳೆಯರ ೪೮ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ರಿತು ಪೊಗಟ್ ಸೆಮಿಫೈನಲ್ ನಲ್ಲಿ ೦-೯ರಲ್ಲಿ ಜಪಾನ್ನ ಯು ಸುಸಾಕಿ ಎದುರು ಸೋತರು. ರಿತು ಕಂಚಿನ ಪದಕಕ್ಕಾಗಿ ನಡೆಯುವ ಪ್ಲೇ ಆಫ್ನಲ್ಲಿ ಆಡಲಿದ್ದಾರೆ.

Related posts

Leave a Reply