Breaking News

ಏಶಿಯನ್ ಜೂನಿಯರ್ ಜೂಡೊ ಬಿಷಕೆಕ್, ಮೂರು ಕಂಚು ಗೆದ್ದ ಭಾರತದ ತರುಣಿಯರು

ಅಪೂರ್ವ ಸಾಮರ್ಥ್ಯ ತೋರಿದ ಭಾರತದ ಮಹಿಳಾ ಜೂಡೊ ಸ್ಪರ್ಧಿಗಳು ಕಿರ್ಗಿಸ್ತಾನದ ಬಿಷಕೆಕ್ನಲ್ಲಿ ನಡೆದ ಏಷ್ಯನ್ ಜೂನಿಯರ್ ಜೂಡೊ ಚಾಂಪಿಯನ್ಷಿಪ್ನಲ್ಲಿ ಮೂರು ಕಂಚು ಗೆದ್ದಿದ್ದಾರೆ.
ಮಹಿಳೆಯರ ೪೪ ಕೆ. ಜಿ. ವಿಭಾಗದ ಕಂಚಿನ ಪದಕದ ಪ್ಲೇ ಆಫ್ ಹೋರಾಟದಲ್ಲಿ ಪ್ರೀತಿ ಅವರು ಮಕಾವ್ನ ಐ ಚೆಂಗ್ ಲೀ ಅವರನ್ನು ಸೋಲಿಸಿ ಕಂಚು ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ನಡೆದಿದ್ದ ಪ್ರಾಥಮಿಕ ಸುತ್ತಿನ ಪೈಪೋಟಿಯಲ್ಲಿ ಚೀನಾ ತೈಪೆಯ ತ್ಸಾಯ್ ಚಿ ಚೊ ಅವರನ್ನು ಮಣಿಸಿದ್ದ ಉತ್ತರ ಪ್ರದೇಶದ ಪ್ರೀತಿ, ಸೆಮಿಫೈನಲ್ ಹಣಾಹಣಿಯಲ್ಲಿ ಉಜ್ಬೆಕಿಸ್ತಾನದ ಗುಲ್ನರ್ ಮುರಾತ್ ಬಯೆವಾ ವಿರುದ್ಧ ಸೋತಿದ್ದರು.
ಮಹಿಳೆಯರ ೫೨ ಕೆ. ಜಿ. ವಿಭಾಗದಲ್ಲಿ ಭಾರತದ ಸವಾಲು ಎತ್ತಿ ಹಿಡಿದಿದ್ದ ಪಿಂಕಿ ಬಲಹರ ಕಂಚಿಗೆ ಕೊರಳೊಡ್ಡಿದರು. ಮೊದಲ ಎರಡು ಸುತ್ತುಗಳಲ್ಲಿ ಗೆದ್ದು ಬೀಗಿದ್ದ ಪಿಂಕಿ ಅವರು ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಚೀನಾ ತೈಪೆಯ ಲಿನ್ ಹುನ್ ಹೂ ವಿರುದ್ಧ ಸೋತಿದ್ದರು. ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್ನಲ್ಲಿ ದೆಹಲಿಯ ಪಿಂಕಿ ಅವರು ದಕ್ಷಿಣ ಕೊರಿಯಾದ ನೆವೊಂಗ್ ಸಾಂಗ್ ಅವರ ಸವಾಲು ಮೀರಿ ನಿಂತರು. ಮಹಿಳೆಯರ ೭೮ ಕೆ. ಜಿ. ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧಿಸಿದ್ದ ಟುಲಿಕಾ ಮಾನ್ ಕೂಡ ಕಂಚು ತಮ್ಮದಾಗಿಸಿಕೊಂಡರು. ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಟುಲಿಕಾ, ಮಂಗೋಲಿಯಾದ ಸೆರ್ಜಿಮ್ಯಾಡಾಗ್ ಶುರೆಂಚಿಮೆಗ್ ವಿರುದ್ಧ ಗೆದ್ದರು.

Related posts

Leave a Reply