Header Ads
Header Ads
Breaking News

ಏಶಿಯನ್ ಸ್ನೂಕರ್ ಚಾಂಪಿಯನ್‌ಶಿಪ್ ಕಜಕಸ್ತಾನ, ಭಾರತಕ್ಕೆ ಪ್ರಶಸ್ತಿ, ಪಾಕಿಸ್ತಾನಕ್ಕೆ ಎರಡನೇ ಸ್ಥಾನ

ಪಂಕಜ್ ಅಡ್ವಾಣಿ ನಾಯಕತ್ವದ ಭಾರತ ಎ ತಂಡ ಏಷ್ಯನ್ ಸ್ನೂಕರ್ ತಂಡ ಚಾಂಪಿಯನ್ಷಿಪ್ನಲ್ಲಿ ಬಿಷೆಕೆಕ್, ಕಜಕಸ್ತಾನ ಇಲ್ಲಿ ಬುಧವಾರ ಪ್ರಶಸ್ತಿ ಎತ್ತಿಹಿಡಿದಿದೆ.
ಫೈನಲ್ ಪಂದ್ಯದಲ್ಲಿ ಭಾರತ ತಂಡ ೩-೦ರಲ್ಲಿ ಪಾಕಿಸ್ತಾನವನ್ನು ಮಣಿಸಿದೆ. ಮೊಹಮ್ಮದ್ ಬಿಲಾಲ್ ವಿರುದ್ಧದ ಮೊದಲ ಪಂದ್ಯವನ್ನು ಪಂಕಜ್ ಗೆದ್ದು ಕೊಂಡರು. ಭರವಸೆಯ ಆಟಗಾರ ಲಕ್ಷ್ಮಣ್ ರಾವುತ್ ಪಾಕಿಸ್ತಾನದ ಬಾಬರ್ ಮಸಿಹ್ ಅವರನ್ನು ಮಣಿಸುವ ಮೂಲಕ ೨-೦ಯ ಮುನ್ನಡೆಗೆ ಕಾರಣರಾದರು. ಎದುರಾಳಿ ಆಟಗಾರ ಖಾತೆ ತೆರೆಯದೇ ಸೋಲು ಒಪ್ಪಿಕೊಂಡರು. ಸಿಂಗಲ್ಸ್ ವಿಭಾಗದ ಹಿನ್ನಡೆಯ ಬಳಿಕ ಡಬಲ್ಸ್ ವಿಭಾಗದಲ್ಲಿ ಆಡಿದ ಪಾಕಿಸ್ತಾನದ ಆಟಗಾರರು ಒತ್ತಡಕ್ಕೆ ಒಳಗಾದರು. ಪಂಕಜ್ ಹಾಗೂ ಲಕ್ಷ್ಮಣ್ ಅವರನ್ನು ಒಳಗೊಂಡ ಡಬಲ್ಸ್ ತಂಡ ಮೂರನೇ ಪಂದ್ಯ ಗೆಲ್ಲುವ ಮೂಲಕ ಪಾಕಿಸ್ತಾನವನ್ನು ಸುಲಭದಲ್ಲಿ ಕಟ್ಟಿ ಹಾಕಿತು.

Related posts

Leave a Reply