Breaking News

ಏಶಿಯಾ ಜೂನಿಯರ್ ಟೇಬಲ್ ಟೆನ್ನಿಸ್, ಭಾರತಕ್ಕೆ ನಾಲ್ಕು ತಂಡ ವಿಭಾಗಗಳಲ್ಲಿ ಬಂಗಾರ

ಭಾರತದ ಆಟಗಾರರು ಕೊಲಂಬೊದಲ್ಲಿ ನಡೆದ ದಕ್ಷಿಣ ಏಷ್ಯಾ ಜೂನಿಯರ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ನಾಲ್ಕು ತಂಡ ವಿಭಾಗಗಳಲ್ಲಿ ಚಿನ್ನ ಎತ್ತಿಹಿಡಿದಿದ್ದಾರೆ.
ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗ ಹಾಗೂ ಕೆಡೆಟ್ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಭಾರತ ಚಿನ್ನ ಜಯಿಸಿದೆ. ಜೂನಿಯರ್ ಬಾಲಕರ ವಿಭಾಗದ ಅಂತಿಮ ಲೀಗ್ ಪಂದ್ಯಗಳಲ್ಲಿ ಭಾರತ ತಂಡ ಪಾಕಿಸ್ತಾನದ ಎದುರು ೩-೦ರಲ್ಲಿ ಹಾಗೂ ಶ್ರೀಲಂಕಾ ತಂಡವನ್ನು ೩-೦ರಲ್ಲಿ ಮಣಿಸಿ ಅಗ್ರಸ್ಥಾನ ಸಾಧಿಸಿದೆ. ಭಾರತದ ಮಾನುಷ್ ಷಾ ೧೧-೭, ೧೧-೬, ೧೧-೯ರಲ್ಲಿ ಪಾಕಿಸ್ತಾನದ ಮಧು ಸೂದನ್ ವಿರುದ್ಧವೂ, ಮನವ್ ೧೧-೯, ೧೧-೬, ೮-೧೧, ೧೧-೪ರಲ್ಲಿ ಉಮೇಶ್ ಎದುರೂ, ಪಾರ್ಥ್ ೯-೧೧, ೧೧-೪, ೧೪-೧೨ರಲ್ಲಿ ನಿಮೇಶ್ ವಿರುದ್ಧ ವೂ ಗೆದ್ದರು.

Related posts

Leave a Reply