Header Ads
Header Ads
Breaking News

‘ಏಷಿಯನ್ ಸಾಫ್ಟ್’ ಸಾಫ್ಟ್‌ವೇರ್ ಡೆವಲಪ್ಪಿಂಗ್ ಕಚೇರಿ ಉದ್ಘಾಟನೆ

ಉಳ್ಳಾಲ: ಎಂಸಿ ಗ್ರೇಡ್ ಇನ್ಫೋಟೆಕ್ ಪ್ರೈ. ಲಿ. ಅವರ ‘ಏಷಿಯನ್ ಸಾಫ್ಟ್’ ಸಾಫ್ಟ್‌ವೇರ್ ಡೆವಲಪ್ಪಿಂಗ್ ಕಚೇರಿಯನ್ನು ದೇರಳಕಟ್ಟೆ ಪುಂಚಮೆ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ಸಾರಿಗೆ ಸಚಿವ ಹೆಚ್.ಎಂ ರೇವಣ್ಣ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ರಾಜ್ಯದ ಯುವಕರು ಸ್ವಂತ ಕಂಪೆನಿಗಳನ್ನು ಸ್ಥಾಪಿಸುವ ಮೂಲಕ ಅನೇಕ ಯುವಕರಿಗೆ ಮಾದರಿಯಾಗಲಿ. ಸಂಸ್ಥೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರನ್ನು ಪಡೆಯಲಿ. ಜನರಿಗೆ ಉತ್ತಮ ಸೇವೆಯನ್ನು ಒದಗಿಸುವ ಮುಖೇನ ಗ್ರಾಮೀಣ ಭಾಗದ ಯುವಕರಿಗೆ ಕೆಲಸವನ್ನು ಒದಗಿಸುವ ಕಾರ್ಯವಾಗಿದೆ ಎಂದು ಹಾರೈಸಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮಾತನಾಡಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಯುವಕನೋರ್ವ ಸ್ವಂತ ಸಂಸ್ಥೆಯನ್ನು ಕಟ್ಟುವ ಮೂಲಕ ರಾಜ್ಯ ಸರಕಾರದ ಚಿಂತನೆಗಳನ್ನು ಪೂರೈಸಿದಂತಾಗಿದೆ. ಯುವಕರಿಗೆ ಸ್ಟಾರ್ಟ್‌ಅಪ್ ಮತ್ತು ಸ್ಕಿಲ್ ಟ್ರೈನಿಂಗ್‌ಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಸಂಸ್ಥೆ ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್‍ಯಾಚರಿಸಲಿ ಎಂದು ಶುಭಹಾರೈಸಿದರು.
ಮಂಜನಾಡಿ ಅಲ್-ಮದೀನಾ ಇಸ್ಲಾಮಿಕ್ ವಿದ್ಯಾ ಸಂಸ್ಥೆ ಅಧ್ಯಕ್ಷ ಅಬ್ಬಾಸ್ ಉಸ್ತಾದ್ ದುಆ ನೆರವೇರಿಸಿದರು.


23 ರ ಹರೆಯದ ಮುನಾಝಿಲ್ ನೀರು ನಿರ್ವಹಣೆ ಕುರಿತ ಸಾಧನವನ್ನು ಆವಿಷ್ಕರಿಸಿ, ಅದನ್ನು ಅಳವಡಿಸಲು 23 ರ ಹರೆಯದಲ್ಲಿ 23 ದೇಶಗಳನ್ನು ಸುತ್ತಿದ್ದಾರೆ. ಬೆಂಗಳೂರು, ಚೆನ್ನೈ, ಸೇರಿದಂತೆ ದೇಶದಲ್ಲಿಯೂ ಸಾಧನವನ್ನು ಅಳವಡಿಸಿರುವ ಮುನಾಝಿಲ್ ಸಾಧನದ ಕುರಿತ ಆಪ್, ಸಾಫ್ಟ್ ವೇರ್ ಅನ್ನು ತಯಾರಿಸಿದ್ದು, ಅದರ ಕುರಿತ ಸಾಧನೆಯನ್ನುಮುಂದುವರಿಸುತ್ತಲೇ ಇದ್ದಾರೆ. ದೇಶದಲ್ಲಿ ನೀರಿನ ಕೊರತೆಯಿರುವುದರಿಂದ ಸಾಧನ ಬಹುಮುಖ್ಯ ಪಾತ್ರ ವಹಿಸಲಿದ್ದು, ಈ ಕುರಿತು ಮುಂದಿನ ದಿನಗಳಲ್ಲಿ ಸರಕಾರದ ಗಮನ ಹರಿಸುವುದಾಗಿ ಮುನಾಝಿಲ್ ತಿಳಿಸಿದರು.
ಮುಡಾ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಇಸ್ಲಾಮಿಕ್ ಸ್ಕಾಲರ್ ಹಝ್ರತ್ , ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಬೆಳ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಸದಸ್ಯ ಕಬೀರ್.ಡಿ, ದೇರಳಕಟ್ಟೆ ಪಬ್ಲಿಕ್ ಶಾಲೆ ಅಧ್ಯಕ್ಷ ಅಬೂಬಕರ್ ಹಾಜಿ, ಎಸ್ ವೈಎಸ್ ಮುಖಂಡ ಎಸ್.ಕೆ.ಅಬ್ದುಲ್ ಖಾದರ್ ಹಾಜಿ ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆ ನಿರ್ದೇಶಕ ಮಹಮ್ಮದ್ ಮುನಾಝಿಲ್, ಅಹಮ್ಮದ್ ಬಾವಾ ಏಷಿಯನ್, ಅಬ್ದುಲ್ ರೆಹಮಾನ್ ಏಷಿಯನ್ ಉಪಸ್ಥಿತರಿದ್ದರು.

ಅರೀಫ್ ಕಲ್ಕಟ್ಟ, ಉಳ್ಳಾಲ