Header Ads
Header Ads
Breaking News

ಏಷ್ಯಾನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನ ಜಕರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಭಾರತದ ಮಹಿಳಾ ಶೂಟರ್‌ಗೆ ಚಿನ್ನದ ಪದಕ ಮಹಿಳಾ ಶೂಟರ್ ರಹಿ ಸರ್ನೊಬತ್‌ಗೆ ಚಿನ್ನ

 

ಇಂಡೋನೇಷಿಯಾದಲ್ಲಿನ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಹದಿನೆಂಟನೇ ಆವೃತ್ತಿಯಲ್ಲಿ ಭಾರತದ ಶೂಟರ್‌ಗಳ ಪದಕ ಬೇಟೆ ಮುಂದುವರಿದಿದೆ. ಬುಧವಾರದ ಪಂದ್ಯದಲ್ಲಿ ಮಹಿಳೆಯರ 25 ಮಿ ಪಿಸ್ತೂಲ್ ವಿಭಾಗದಲ್ಲಿ ರಾಹಿ ಸರ್ನೊಬಾತ್ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ.ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಶೂಟರ್ ಸೌರಭ್ ಚೌಧರಿಭಾರತಕ್ಕೆ ಶೂಟಿಂಗ್ ವಿಭಾಗದ ಮೊದಲ ಚಿನ್ನ ಗಳಿಸಿಕೊಟ್ಟರೆ ಇದೀಗ ಮಹಿಳೆಯರ ವಿಭಾಗದಲ್ಲಿ ರಾಹಿ ಚಿನ್ನ ಗೆಲ್ಲುವ ಮೂಲಕ ಬಾರತದ ಕೀರ್ತಿಗೆ ಇನ್ನಷ್ಟು ಮೆರುಗು ತಂದಿದ್ದಾರೆ. ದೀಪಾ ಕರ್ಮಾಕರ್ ನಿರ್ಗಮನತೀವ್ರ ಮಂಡಿನೋವಿನ ಕಾರಣ ಭಾರತದ ಸ್ಟಾರ್ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಏಷ್ಯನ್ ಗೇಮ್ಸ್ ಕ್ರೀಡಾಕೂಟದಿಂದ ನಿರ್ಗಮಿಸಿದ್ದಾರೆ. ಜಿಮ್ನಾಸ್ಟಿಕ್ ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದ ದೀಪಾ ನಿರ್ಗಮನ ಕ್ರೀಡಾ ಪ್ರೇಮಿಗಳಿಗೆ ತೀವ್ರ ನಿರಾಶೆ ತಂದಿದೆ.

Related posts

Leave a Reply